For the best experience, open
https://m.justkannada.in
on your mobile browser.

ಮೈಸೂರಿನ ಮಲೆ ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ

06:32 PM Dec 13, 2023 IST | prashanth
ಮೈಸೂರಿನ ಮಲೆ ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಮಾಜಿ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ

ಮೈಸೂರು,ಡಿಸೆಂಬರ್,13,2023(www.justkannada.in): ಮೈಸೂರಿನ ಶಾಂತಲಾ ಥಿಯೇಟರ್ ಬಳಿಯ ಪ್ರಸಿದ್ದ ಮಲೆ ಮಹದೇಶ್ವರ ದೇವಾಲಯಕ್ಕೆ ಡಾ ಯತೀಂದ್ರ ಸಿದ್ದರಾಮಯ್ಯ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು,
ಯತೀಂದ್ರ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ ಅದ್ದೂರಿಯಾಗಿ ಬರಮಾಡಿಕೊಂಡರು. ಪ್ರತಿ ವರ್ಷದಂತೆ ಈ ವರ್ಷವೂ ಸಹ ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು, ಮುಂಜಾನೆಯಿಂದಲೇ ಮಲೆ ಮಹದೇಶ್ವರಿನಿಗೆ ವಿವಿಧ ಹೂಗಳಿಂದ ಅಲಂಕಾರ ಮಾಡಿ, ಹಲವು ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು, ಕೊಂಡಮಹೋತ್ಸವ ಕೂಡಾ ಸಂಭ್ರಮ ಸಡಗರದಿಂದ ನೆರವೇರಿತ್ತು,
ದೇವಾಲಯದ ಗೌರವಾಧ್ಯಕ್ಷ, ನಗರಪಾಲಿಕೆ ಸದಸ್ಯ ಲೋಕೇಶ್ ಪಿಯಾ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿತು, ದೇವಾಲಯಕ್ಕೆ ಆಗಮಿಸಿದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು, ದೇವಾಲಯಕ್ಕೆ ಆಗಮಿಸಿದ ಯತೀಂದ್ರ ಅವರಿಗೆ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಹಾರ, ಪೇಟ, ಹಾಕಿ ಸನ್ಮಾನಿಸಿದರು.
Key words: Former MLA- Dr. Yatindra Siddaramaiah - special pooja – male Mahadeshwara

Tags :

.