For the best experience, open
https://m.justkannada.in
on your mobile browser.

ಎಐಸಿಸಿ ಅಧ್ಯಕ್ಷರಾಗಿ 1 ವರ್ಷ ಪೂರೈಕೆ; ನನಗೆ ಕೊಟ್ಟ ಕೆಲಸವನ್ನ ಸಮರ್ಥವಾಗಿ ನಿಭಾಯಿಸಿದ್ದೇನೆ- ಮಲ್ಲಿಕಾರ್ಜುನ ಖರ್ಗೆ.

05:42 PM Oct 28, 2023 IST | prashanth
ಎಐಸಿಸಿ ಅಧ್ಯಕ್ಷರಾಗಿ 1 ವರ್ಷ ಪೂರೈಕೆ  ನನಗೆ ಕೊಟ್ಟ ಕೆಲಸವನ್ನ ಸಮರ್ಥವಾಗಿ ನಿಭಾಯಿಸಿದ್ದೇನೆ  ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ,ಅಕ್ಟೋಬರ್,28,2023(www.justkannada.in): ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ  ಒಂದು ವರ್ಷ ಪೂರೈಸಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನನಗೆ ಕೊಟ್ಟ ಕೆಲಸವನ್ನ ಸಮರ್ಥವಾಗಿ ನಿಭಾಯಿಸಿದ್ದೇನೆ. ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಕೆಲಸ ಮಾಡಿದ್ದೇನೆ ಎಂದಿದ್ದಾರೆ.

ಇಂದು ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾನು ಎಐಸಿಸಿ ಅಧ್ಯಕ್ಷನಾಗಿ ಒಂದು ವರ್ಷ ಪೂರೈಸಿದ್ದೇನೆ. ಎರಡನೇ ವರ್ಷದಲ್ಲಿ ತೆಲಂಗಾಣ ಸೇರಿದಂತೆ ಅನೇಕ ರಾಜ್ಯಗಳ ಚುನಾವಣೆಗಳಿವೆ. ಎರಡನೇ ವರ್ಷದಲ್ಲಿ ಬಹಳಷ್ಟು ಸವಾಲುಗಳಿವೆ ಅದನ್ನು ಬಗೆಹರಿಸುತ್ತೇನೆ. ಆಗ ಮಾತ್ರ ಹೆಸರು ಬರುತ್ತದೆ. ಯಾವ ಸಮಸ್ಯೆ ಕೂಡ ನನಗೆ ಕಠಿಣ ಅನ್ನಿಸುತ್ತಿಲ್ಲ ಎಂದರು.

ಪಂಚರಾಜ್ಯ ಚುನಾವಣೆಯಲ್ಲಿ ಎಲ್ಲಾ ಕಡೆ ಉತ್ತಮ ವಾತಾವರಣವಿದೆ. ಆದರೆ ಮೋದಿ ಸರ್ಕಾರ ಇಡಿ ದಾಳಿ ಮಾಡಿ ನಮ್ಮ ಸಿಎಂ‌, ಮಂತ್ರಿ ಹಾಗೂ ಕಾರ್ಯಕರ್ತರ ಶಕ್ತಿ ಕುಂದಿಸಲು ಪ್ರಯತ್ನಿಸುತ್ತಿದ್ದಾರೆ. ಅಲ್ಲಿ ನಾಮಪತ್ರ ಸಲ್ಲಿಸುವ ಕೆಲಸ ನಡೆಯುತ್ತಿರುವ ವೇಳೆ ತಮ್ಮ ಎಲ್ಲಾ ಅಸ್ತ್ರ ಪ್ರಯೋಗ ಮಾಡುತ್ತಿದ್ದಾರೆ. ಮೋದಿ ತಮ್ಮ ಬಳಿ ಇರುವ ಎಲ್ಲಾ ಅಸ್ತ್ರ ಗಳನ್ನು ರಾಜಕೀಯವಾಗಿ ಬಳಸುತ್ತಿದ್ದಾರೆ ಎಂದು ಕಿಡಿಕಾರಿದರು.

Key words: 1 year - complete- AICC -President – Mallikarjuna Kharge.

Tags :

.