For the best experience, open
https://m.justkannada.in
on your mobile browser.

ಉಗ್ರರ ದಾಳಿಯಿಂದ ಪಾಕ್ ನ 10 ಪೊಲೀಸರು ದುರ್ಮರಣ.

10:29 AM Feb 05, 2024 IST | prashanth
ಉಗ್ರರ ದಾಳಿಯಿಂದ ಪಾಕ್ ನ 10 ಪೊಲೀಸರು ದುರ್ಮರಣ

ಇಸ್ಲಾಮಾಬಾದ್,ಫೆಬ್ರವರಿ,5,2024(www.justkannada.in): ಪಾಕಿಸ್ತಾನದಲ್ಲಿ ಉಗ್ರರ ದಾಳಿಯಿಂದಾಗಿ 10 ಪೊಲೀಸರು ಸಾವನ್ನಪ್ಪಿರುವ ಘಟನೆ ನಡೆದಿದೆ. 

ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾದ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ಪೊಲೀಸ್ ಠಾಣೆಯ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ ಎನ್ನಲಾಗಿದ್ದು, 10 ಪೊಲೀಸರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ ಎಂದು  ತಿಳಿದು ಬಂದಿದೆ.

ಗಾಯಗೊಂಡವರನ್ನು ಡಿಎಚ್ಕ್ಯೂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಫೆಬ್ರವರಿ 8 ರಂದು ಪಾಕಿಸ್ತಾನದಲ್ಲಿ ಚುನಾವಣೆ ಹಿನ್ನೆಲೆ ಭದ್ರತೆಗೆ ನಿಯೋಜನೆಗೊಂಡ ಪೊಲೀಸರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

Key words: 10 Pakistani police-death- terrorist attack.

Tags :

.