HomeBreaking NewsLatest NewsPoliticsSportsCrimeCinema

100 ಕೋಟಿ ಆಫರ್ ಆರೋಪ: ವಿಷಯ ಡೈವರ್ಟ್ ಮಾಡಲು ಈ ಪ್ರಯತ್ನ- ಸಚಿವ ಮಧು ಬಂಗಾರಪ್ಪ

01:09 PM May 18, 2024 IST | prashanth

ಚಿಕ್ಕಮಗಳೂರು,ಮೇ,18,2024 (www.justkannada.in):  ಪ್ರಜ್ವಲ್ ರೇವಣ್ಣ  ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ತನಗೆ 100 ಕೋಟಿ ರೂ. ಆಫರ್ ನೀಡಿದ್ದರು  ಎಂಬ ವಕೀಲ ಮತ್ತು ಬಿಜೆಪಿ ಮುಖಂಡ  ದೇವರಾಜೇಗೌಡರ ಆರೋಪ ಕುರಿತು ಪ್ರತಿಕ್ರಿಯಿಸಿರುವ  ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿಷಯ ಡೈವರ್ಟ್ ಮಾಡಲು ಈ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ರೀತಿ ಹೇಳಿಕೆ, ಆರೋಪಗಳನ್ನು ಮಾಡುತ್ತಿರುವ ದೇವರಾಜೇಗೌಡರು ಯಾವ ಸ್ಥಿತಿಯಲ್ಲಿದ್ದಾರೆ ಅನ್ನೋದನ್ನು ಅರ್ಥಮಾಡಿಕೊಳ್ಳಬೇಕು, ಜನರ ಗಮನವನ್ನು ಬೇರೆಡೆ ತಿರುಗಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.

ಇಡೀ ಪ್ರಕರಣದಲ್ಲಿ ಕಾನೂನಿಗಿಂತ ಮಿಗಿಲಾದವರು ಯಾರೂ ಇಲ್ಲ, ವ್ಯಕ್ತಿ ಯಾರೇ ಆಗಿರಲಿ ಅವರಿಂದ ತಪ್ಪಾಗಿದ್ದರೆ ಕಾನೂನು ನಿಶ್ಚಿತವಾಗಿ ಕ್ರಮ ತೆಗೆದುಕೊಳ್ಳುತ್ತದೆ.  ಸಂತ್ರಸ್ತೆಯರ ಬಗ್ಗೆ ಯಾರೂ ಯೋಚನೆ ಮಾಡುತ್ತಿಲ್ಲ, ಅವರಿಗೆ ನ್ಯಾಯ ಕೊಡಿಸುವ ಕೆಲಸ ಮೊದಲು ನಡೆಯಬೇಕು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

Key words: 100 crore, offer, allegation, Madhu Bangarappa

Tags :
100 crore-offer-allegation—Minister-Madhu Bangarappa
Next Article