HomeBreaking NewsLatest NewsPoliticsSportsCrimeCinema

ದುರಂತಕ್ಕೀಡಾದ ವಯನಾಡ್ ನಲ್ಲಿ 100 ಮನೆ ನಿರ್ಮಾಣ: ಸಿಎಂ‌ ಸಿದ್ದರಾಮಯ್ಯ ಘೋಷಣೆ

04:55 PM Aug 03, 2024 IST | mahesh

 

100 houses to be constructed in Wayanad; C.M. Siddaramaiah

ಶಿರಾಡಿ ಘಾಟ್, ಆ.03,2024: (www.justkannada.in news) ಪ್ರವಾಹ ಪೀಡಿತ ವಯನಾಡ್ ಗೆ ರಾಜ್ಯದ ನೆರವನ್ನು ಇನ್ನಷ್ಟು ವಿಸ್ತರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನೂರು ಮನೆಗಳನ್ನು ನಿರ್ಮಿಸಿಕೊಡುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಶಿರಾಡಿ ಘಾಟ್‌ ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್  ಜೊತೆ ಧೂರವಾಣಿ ಮೂಲಕ ಮಾತನಾಡಿದ್ದೇನೆ. ಅಗತ್ಯ ಇರುವ ನೆರವನ್ನು ವಿಸ್ತರಿಸುವುದಾಗಿ ಹೇಳಿದರು.

ಘಟನೆಯಲ್ಲಿ ನಾಪತ್ತೆಯಾಗಿರುವ ಒಟ್ಟು ಕನ್ನಡಿಗರ ಲೆಕ್ಕ ಸಿಗಲು ಇನ್ನಷ್ಟು ಸಮಯ ಬೇಕು. ರಕ್ಷಣಾ ಕಾರ್ಯಾಚರಣೆ ಪೂರ್ತಿ ಮುಗಿದ ಬಳಿಕ ತಿಳಿಯಲಿದೆ ಎಂದರು.

ವಯನಾಡಿನಲ್ಲಿ 100 ಸುಸಜ್ಜಿತ ಮನೆಗಳನ್ನು ನಿರ್ಮಿಸಲು ತೀರ್ಮಾನಿಸಿದ್ದೇವೆ. ಯಾವ ಸ್ಥಳದಲ್ಲಿ ನಿರ್ಮಿಸಬೇಕು, ಯಾವ ವೆಚ್ಚದಲ್ಲಿ ನಿರ್ಮಿಸಬೇಕು ಎನ್ನುವುದನ್ನು ನಂತರ ತೀರ್ಮಾನಿಸಲಾಗುವುದು ಎಂದರು.

key words: 100 houses, to be constructed, in Wayanad, Cm Siddaramaiah

Tags :
100 housesCM Siddaramaiahin Wayanadto be constructed
Next Article