ಹೃದಯಾಘಾತದಿಂದ 11 ವರ್ಷದ ಬಾಲಕ ಸಾವು
10:29 AM Sep 21, 2024 IST
|
prashanth
ಹಾಸನ,ಸೆಪ್ಟಂಬರ್,21,2024 (www.justkannada.in): ಹೃದಯಾಘಾತದಿಂದ 11 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಹಾಸನದ ಅಲೂರು ತಾಲೂಕಿನ ಚಿನ್ನಪುರದಲ್ಲಿ ನಡೆದಿದೆ.
ಸಚಿನ್ (11) ಮೃತಪಟ್ಟ ಬಾಲಕ ಎಂದು ತಿಳಿದು ಬಂದಿದೆ. ನಿನ್ನೆ ಅನಾರೋಗ್ಯ ಹಿನ್ನೆಲೆ ಸಚಿನ್ ಶಾಲೆಗೆ ಹೋಗಿರಲಿಲ್ಲ. ಶಾಲೆಗೆ ಹೋಗದೇ ಇರುವುದುನ್ನು ತಂದೆ-ತಾಯಿ ಗಮನಿಸಿದ್ದಾರೆ. ಈ ನಡುವೆ ಮನೆಯಲ್ಲಿ ಉಳಿದುಕೊಂಡಿದ್ದ, ಸಚಿನ್ ಮನೆಯಲ್ಲಿ ಟಿವಿ ನೋಡುತ್ತಲ್ಲೇ ಇದ್ದ. ಈ ವೇಳೆ ಹೃದಯಾಘಾತವಾಗಿದ್ದು ಗಮನಿಸಿದ ಪೋಷಕರು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಈ ನಡುವೆ ಆಸ್ಪತ್ರೆಯಲ್ಲಿ ವೈದ್ಯರು ಸಚಿನ್ ಸಾವನ್ನಪ್ಪಿದ್ದಾರೆ ಅಂಥ ತಿಳಿಸಿದ್ದಾರೆ ಎನ್ನಲಾಗಿದೆ. ಸಚಿವ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು.
Key words: 11-year, old boy, died, heart attack
Next Article