ಲೋಕಸಭೆಯಿಂದ ಈವರೆಗೆ 14 ಸಂಸದರು ಅಮಾನತು.
06:19 PM Dec 14, 2023 IST
|
prashanth
ನವದೆಹಲಿ,ಡಿಸೆಂಬರ್,14,2023(www.justkannada.in): ಭದ್ರತಾ ವೈಪಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಹಿನ್ನೆಲೆ 14 ಸಂಸದರನ್ನ ಅಮಾನತು ಮಾಡಲಾಗಿದೆ.
ಮೊದಲಿಗೆ ಲೋಕಸಭೆಯಿಂದ ಐವರು ಸಂಸದರು ಅಮಾನತುಗೊಳಿಸಲಾಗಿತ್ತು. ಜ್ಯೋತಿಮಣಿ, ಹೈಬಿ ಈಡನ್ , ಡೀನ್ ಕುರಿಯಾಕೋಸ್ ಸೇರಿ ಐವರನ್ನು ಅಮಾನತು ಮಾಡಲಾಗಿತ್ತು. ನಂತರ 9 ಮಂದಿ ಸಂಸದರನ್ನ ಅಮಾನತು ಮಾಡಲಾಗಿದೆ. ಟಿಎನ್ ಪ್ರತಾಪನ್, ಹೈಬಿ ಈಡನ್, ಜೋತಿಮಣಿ, ರಮ್ಯಾ ಹರಿದಾಸ್ ಮತ್ತು ಡೀನ್ ಕುರಿಯಾಕೋಸ್ ಅವರನ್ನು ಅಮಾನತುಗೊಳಿಸಲಾಗಿದೆ.
ಚಳಿಗಾಲ ಅಧಿವೇಶನ ಮುಗಿಯುವವರೆಗೂ 14 ಮಂದಿಯನ್ನ ಅಮಾನತು ಮಾಡಲಾಗಿದೆ. ಈ ವಿಚಾರದಲ್ಲಿ ಯಾವುದೇ ಸದಸ್ಯರಿಂದ ರಾಜಕೀಯ ನಿರೀಕ್ಷಿಸುವುದಿಲ್ಲ, ಪಕ್ಷ ರಾಜಕಾರಣ ಮೀರಿ ಕೆಲಸ ಮಾಡಬೇಕು ಎಂದು ಸ್ಪೀಕರ್ ಹೇಳಿದ್ದಾರೆ.
Key words: 14 MPs – suspended- from - Lok Sabha.
Next Article