HomeBreaking NewsLatest NewsPoliticsSportsCrimeCinema

‘1857ರ ಜನಕ್ರಾಂತಿ ನೆನೆಪಿಗೆ ಸೇರಿದ ಹುತಾತ್ಮರು’ ಪುಸ್ತಕ ಬಿಡುಗಡೆ.

04:31 PM Dec 01, 2023 IST | prashanth

ಬೆಂಗಳೂರು,ಡಿಸೆಂಬರ್,1,2023(www.justkannada.in): ಕೇಂದ್ರ ಸಮಾಚಾರ ಮತ್ತು ಪ್ರಸಾರ ಸಚಿವಾಲಯದ  ಪ್ರಕಾಶನ ವಿಭಾಗ  ಸ್ವಾತಂತ್ರ್ಯದ  ಅಮೃತ ಮಹೋತ್ಸವ  ಪುಸ್ತಕ ಸರಣಿಯಡಿ  ಹೊರ ತಂದಿರುವ “1857ರ ಜನಕ್ರಾಂತಿ  ನೆನೆಪಿಗೆ ಸೇರಿದ  ಹುತಾತ್ಮರು’’ ಕನ್ನಡ  ಪುಸ್ತಕವನ್ನು ಸಚಿವಾಲಯದ ಜಂಟಿ ಕಾರ್ಯದರ್ಶಿ ವಿಕ್ರಮ್ ಸಹಾಯ್ ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಡುಗಡೆ  ಮಾಡಿದರು.

ಸ್ವಾತಂತ್ರ್ಯದ  ಅಮೃತ ಮಹೋತ್ಸವ ವರ್ಷಾಚರಣೆ ಅಂಗವಾಗಿ ಪ್ರಕಾಶನ ವಿಭಾಗ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ ಬಲಿದಾನಗಳನ್ನು ಯುವಜನರಿಗೆ ಪರಿಚಯಿಸುವ ಉದ್ದೇಶದಿಂದ ಇಂತಹ ಪುಸ್ತಕಗಳನ್ನು ವಿವಿಧ ಭಾರತೀಯ ಭಾಷೆಗಳಲ್ಲಿ ಪ್ರಕಟಿಸುತ್ತಿದೆ.

“1857ರ ಜನಕ್ರಾಂತಿ ನೆನೆಪಿಗೆ ಸೇರಿದ ಹುತಾತ್ಮರು’’ ಪುಸ್ತಕ. ದೇಶದ ಮಹಾನ್ ಹೋರಾಟಗಾರರ ಕೊಡುಗೆಯನ್ನು ದಾಖಲಿಸುವ  ಪ್ರಯತ್ನವಾಗಿದೆ. ಪುಸ್ತಕದಲ್ಲಿ ನರಗುಂದದ  ಭಾಸ್ಕರ್ ರಾವ್ ಬಾಬಾ ಸಾಹೇಬರ ಸೇವೆಯನ್ನು ಸ್ಮರಿಸುವ  ಮೂಲಕ  ಅಕ್ಷರ ನಮನ  ಸಲ್ಲಿಸಲಾಗಿದೆ.

ಪುಸ್ತಕದ ಕುರಿತು ಕಿರು ಟಿಪ್ಪಣಿ

1857ರ ಕ್ರಾಂತಿಯಲ್ಲಿ ಹಿಂದೂಗಳು ಮತ್ತು ಮುಸಲ್ಮಾನರು  ಹೆಗಲಿಗೆ ಹೆಗಲು ಕೊಟ್ಟು ಜೊತೆ ಜೊತೆಯಾಗಿ ಯುದ್ಧದಲ್ಲಿ ಭಾಗವಹಿಸಿದರು. ಈ ಜನ ಕ್ರಾಂತಿಯಲ್ಲಿ ಯೋಗಿಗಳು, ಫಕೀರರು, ಧೂತರು ಮತ್ತು ಸಂದೇಶವಾಹಕರು  ಮೊದಲಾದವರು  ಪ್ರತಿಯೊಂದು ಊರುಕೇರಿಗಳಿಗೆ ತೆರಳಿ ಪ್ರಚಾರ ಮಾಡುತ್ತಾ ಕ್ರಾಂತಿಯ ಜ್ವಾಲೆ ಉರಿಯುವಂತೆ ಮಾಡಿದರು. ಈ ಕ್ರಾಂತಿಯಲ್ಲಿ ಭಾಗವಹಿಸಿ  ಹುತಾತ್ಮರಾದವರ ಬಗ್ಗೆ ಅಪರಿಚಿತವಾಗಿ ಉಳಿದಿರುವ ಮಾಹಿತಿಗಳನ್ನು ಪುಸ್ತಕಗಳು ಮತ್ತು ಪ್ರಾಚೀನ ಪತ್ರಾಗಾರಗಳಿಂದ ಹುಡುಕಿ ತೆಗೆದು ಈ ಪುಸ್ತಕದಲ್ಲಿ ದಾಖಲಿಸಿ ದೇಶವಾಸಿಗಳ ಮುಂದಿಡುವ ಪ್ರಯತ್ನ ಮಾಡಲಾಗಿದೆ. ಇವರೆಲ್ಲರ ಮೌಲ್ಯಯುತ ಬಲಿದಾನದ ಕಾರ್ಯಗಳನ್ನು ಸಾದರಪಡಿಸಲು ಲೇಖಕಿ ಶ್ರೀಮಿತ ಉಷಾ ಚಂದ್ರ ಇಲ್ಲಿ ಪ್ರಯತ್ನಿಸಿದ್ದಾರೆ.

Key words: 1857 Janakranti –commemoration- Martyrs- book -release.

 

Tags :
1857 Janakranti –commemoration- Martyrs- book -release.
Next Article