For the best experience, open
https://m.justkannada.in
on your mobile browser.

ಈ ಬಾರಿ ಜನಸ್ಪಂದನ ಕಾರ್ಯಕ್ರಮದಲ್ಲಿ ಸುಮಾರು 20 ಸಾವಿರ ಜನರು ಭಾಗಿ- ಸಿಎಂ ಸಿದ್ದರಾಮಯ್ಯ.

06:24 PM Feb 08, 2024 IST | prashanth
ಈ ಬಾರಿ ಜನಸ್ಪಂದನ ಕಾರ್ಯಕ್ರಮದಲ್ಲಿ ಸುಮಾರು 20 ಸಾವಿರ ಜನರು ಭಾಗಿ  ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಫೆಬ್ರವರಿ,8,2024(www.justkannada.in):  ಇಂದು ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಸುಮಾರು 20 ಸಾವಿರ ಜನರು ಭಾಗಿಯಾಗಿದ್ದರು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಇಂದು ವಿಧಾನಸೌಧದ ಆವರಣದಲ್ಲೇ ರಾಜ್ಯಮಟ್ಟದ ಜನಸ್ಪಂದನ  ಕಾರ್ಯಕ್ರಮ ನಡೆದಿದ್ದು, ಈ ಬಾರಿಯ ಜನಸ್ಪಂದನಕ್ಕೆ ಜನಸಾಗರವೇ ಹರಿದುಬಂದಿತ್ತು. ಇಂದು ಬೆಳಿಗ್ಗೆ 10ರಿಂದ 6 ಗಂಟೆವರೆಗೆ ಕಾರ್ಯಕ್ರಮ ನಡೆದಿತ್ತು. ಈ ಮೊದಲು ಕಳೆದ ಸೆಪ್ಟೆಂಬರ್‌ ನಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಜನಸ್ಪಂದನ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಸಾವಿರಾರು ಜನರ ಅಹವಾಲು ಸ್ವೀಕರಿಸಿ ಪರಿಹರಿಸಿದ್ದರು.

ಎರಡನೇ ಬಾರಿಯ ಜನಸ್ಪಂದನ ಕಾರ್ಯಕ್ರಮದಲ್ಲಿ 20 ಸಾವಿರ ಜನ ಭಾಗಿ ಆಗಿದ್ದಾರೆ. ಜನರ ಬಳಿ ತೆರಳಿ ಖುದ್ದು ಸಿಎಂ ಸಿದ್ದರಾಮಯ್ಯ ಅಹವಾಲು ಸ್ವೀಕರಿಸಿದ್ದಾರೆ. ಈ ಬಾರಿ ಒಟ್ಟು 11 ಸಾವಿರ ಅರ್ಜಿಗಳ ನೋಂದಣಿಯಾಗಿದೆ.

ಈ ಕುರಿತು ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿ ಸಿಎಂ ಸಿದ್ದರಾಮಯ್ಯ, ಇಂದಿನ ಜನಸ್ಪಂದನ ಕಾರ್ಯಕ್ರಮದಲ್ಲಿ 11,000 ಜನ ಭಾಗವಹಿಸಿದ್ದರು. ಅರ್ಜಿದಾರರ ಜೊತೆ ಅವರ ಸಂಬಂಧಿಕರು ಕೂಡ ಭಾಗವಹಿಸಿದ್ದರು. ಇಂದಿನ ಕಾರ್ಯಕ್ರಮದಲ್ಲಿ‌ ಸುಮಾರು 20,000 ಜನರು ಭಾಗವಹಿಸಿದ್ದಾರೆ. ಹೆಚ್ಚಾಗಿ ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳು ಬಂದಿದ್ದಾವೆ. ಕೆಲವು ಅರ್ಜಿಗಳನ್ನ ಸ್ಥಳದಲ್ಲೇ ಇತ್ಯರ್ಥಪಡಿಸಲಾಗಿದೆ ಎಂದು ಹೇಳಿದರು.

ನೂರಾರು ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಿ ಆದೇಶ ಮಾಡಿದ್ದೇವೆ. ಇಲಾಖೆ, ಸಂಬಂಧಪಟ್ಟ ಕಾರ್ಯದರ್ಶಿಗಳಿಗೆ ಅರ್ಜಿ ಕೊಡಲಾಗಿದೆ. ಜಾಗೃತೆಯಿಂದ ಅಧಿಕಾರಿಗಳು ಅರ್ಜಿ ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಡಿಸಿಗಳು, ಜಿ.ಪಂ. ಸಿಇಒಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ನೀವು ಕೆಲಸ ಮಾಡಿದ್ದರೆ ನಮಗೆ ಬರುವ ಅರ್ಜಿಗಳ ಸಂಖ್ಯೆ ಕಡಿಮೆ ಆಗುತ್ತೆ. ಡಿಸಿ, ಸಿಇಒಗಳು ಕೆಲಸ ಮಾಡಿದರೆ ಆಡಳಿತ ಚುರುಕಾಗಿದೆ ಅಂದುಕೊಳ್ಳುತ್ತಾರೆ. ಆಡಳಿತ ಸಮಸ್ಯೆಯಿಂದ ಕೂಡಿರಬಾರದು ಎಂದು  ಸಿಎಂ ಸಿದ್ದರಾಮಯ್ಯ ತಿಳಿಸಿದರು.

Key words: 20 thousand- people -participated - Janaspandan program- CM Siddaramaiah.

Tags :

.