HomeBreaking NewsLatest NewsPoliticsSportsCrimeCinema

ರಾಜ್ಯದಲ್ಲಿ 2ನೇ ಹಂತದ ಮತದಾನ: ಬೆಳಿಗ್ಗೆ 9ರವರೆಗೆ ವೋಟಿಂಗ್ ಪ್ರಮಾಣವೆಷ್ಟು ಗೊತ್ತೆ..?

10:22 AM May 07, 2024 IST | prashanth

ಬೆಳಗಾವಿ,ಮೇ,7,2024 (www.justkannadain):  ರಾಜ್ಯದಲ್ಲಿ 2ನೇ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಲ್ಲಿ  ಇಂದು ಮತದಾನ ನಡೆಯುತ್ತಿದ್ದು ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಬೆಳಿಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯುತ್ತಿದೆ. ಈ ನಡುವೆ ಬೆಳಿಗ್ಗೆ 9 ಗಂಟೆ ವೇಳೆಗೆ ಬೆಳಗಾವಿ ಕ್ಷೇತ್ರದಲ್ಲಿ ಶೇಕಡಾ 9.31ರಷ್ಟು ಮತದಾನವಾಗಿದೆ. ಚಿಕ್ಕೋಡಿ ಕ್ಷೇತ್ರದಲ್ಲಿ 9 ಗಂಟೆವರೆಗೆ ಶೇ.10.79ರಷ್ಟು, ಬಳ್ಳಾರಿ ಕ್ಷೇತ್ರದಲ್ಲಿ ಶೇಕಡಾ 10.36ರಷ್ಟು, ದಾವಣಗೆರೆ ಕ್ಷೇತ್ರದಲ್ಲಿ ಶೇಕಡಾ 9.35ರಷ್ಟು, ಶಿವಮೊಗ್ಗದಲ್ಲಿ ಶೇ. 11.39 ರಷ್ಟು, ಬಾಗಲಕೋಟೆಯಲ್ಲಿ ಶೇ 8.59ರಷ್ಟು,  ವಿಜಯಪುರದಲ್ಲಿ ಶೇ. 9.26ರಷ್ಟು ಮತದಾನವಾಗಿದೆ.

ಧಾರವಾಡದಲ್ಲಿ ಶೇ. 9.38ರಷ್ಟು, ಕಲಬುರಗಿಯಲ್ಲಿ ಶೇ. 8.71ರಷ್ಟು, ಹಾವೇರಿ ಶೇ. 8.62ರಷ್ಟು, ಕೊಪ್ಪಳದಲ್ಲಿ ಶೇ. 8.79ರಷ್ಟು, ರಾಯಚೂರಿನಲ್ಲಿ ಶೇ. 8.27ರಷ್ಟು,  ಉತ್ತರ ಕನ್ನಡದಲ್ಲಿ ಶೇ. 11.07ರಷ್ಟು ಮತದಾನವಾಗಿದೆ.

Key words: 2nd phase, election, state, voting

Tags :
2nd phase election- state-voting
Next Article