For the best experience, open
https://m.justkannada.in
on your mobile browser.

2ನೇ ಟೆಸ್ಟ್: ಇಂಗ್ಲೇಂಡ್ ವಿರುದ್ದ ಭಾರತಕ್ಕೆ ಭರ್ಜರಿ ಜಯ.

02:57 PM Feb 05, 2024 IST | prashanth
2ನೇ ಟೆಸ್ಟ್  ಇಂಗ್ಲೇಂಡ್ ವಿರುದ್ದ ಭಾರತಕ್ಕೆ ಭರ್ಜರಿ ಜಯ

ವಿಶಾಖಪಟ್ಟಣಂ,ಫೆಬ್ರವರಿ,5,2024(www.justkannada.in): ಇಂಗ್ಲೇಂಡ್ ವಿರುದ್ದದ ಐದು ಟೆಸ್ಟ್ ಸರಣಿಗಳ ಪೈಕಿ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ.

ವಿಶಾಖಪಟ್ಟಣಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಕ್ಯಾಪ್ಟನ್ ರೋಹಿತ್ ನೇತೃತ್ವದ ಟೀಮ್ ಇಂಡಿಯಾ ಗೆಲುವಿನ ನಗೆ ಬೀರಿದೆ.   ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್  ಮಾಡಿದ ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 396 ರನ್ ಕಲೆ ಹಾಕಿತು.   ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ  290 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 19 ಫೋರ್​ಗಳೊಂದಿಗೆ 209 ರನ್ ಬಾರಿಸಿದ್ದರು.

ನಂತರ  ಪ್ರಥಮ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಕೇವಲ 253 ರನ್​ಗಳಿಗೆ ಆಲ್ ಔಟ್ ಆಯಿತು. ಭಾರತದ ಪರ ಬುಮ್ರಾ 45 ರನ್ ನೀಡಿ 6 ವಿಕೆಟ್ ಕಿತ್ತಿ ಸಂಭ್ರಮಿಸಿದರು.

ಮೊದಲ ಇನಿಂಗ್ಸ್​​ನಲ್ಲಿನ 143 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಪರ ಶುಭ್​ಮನ್ ಗಿಲ್ (104) ಶತಕ ಬಾರಿಸಿ ಭಾರತ ಸ್ಕೋರ್ ಹೆಚ್ಚಲು ನೆರವಾದರು. ಆದರೆ ಉಳಿದ ಬ್ಯಾಟ್ಸ್ ಮನ್ ಗಳಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ.  ಪರಿಣಾಮ ಭಾರತ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 255 ರನ್​ಗಳಿಗೆ ಆಲೌಟ್ ಆಯಿತು. ಈ ಮೂಲಕ ಇಂಗ್ಲೇಂಡ್ ಗೆ 399 ರನ್ ಟಾರ್ಗೆ ನೀಡಿತು.

ಗುರಿ ಬೆನ್ನತ್ತಿದ ಇಂಗ್ಲೇಂಡ್ 292 ರನ್​ಗಳಿಗೆ ಆಲೌಟ್ ಆಗಿದ್ದು ಈ ಮೂಲಕ ಭಾರತ 106 ರನ್ ​ಗಳ ಜಯಸಾಧಿಸಿತು.  ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 1-1 ಅಂತರದಿಂದ ಸಮಬಲ ಸಾಧಿಸಿದೆ. ಇದಕ್ಕೂ ಮುನ್ನ ಹೈದರಾಬಾದ್​ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಜಯ ಸಾಧಿಸಿತ್ತು.

Key words: 2nd Test- Huge win - India -against -England.

Tags :

.