ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ಘೋಷಣೆ ಮಾಡಿದ ಕೇಂದ್ರ ಸರ್ಕಾರ
11:18 AM Apr 27, 2024 IST
|
prashanth
ಬೆಂಗಳೂರು,ಏಪ್ರಿಲ್,27,2024 (www.justkannada.in): ರಾಜ್ಯಕ್ಕೆ ಬರ ಪರಿಹಾರ ನೀಡುವ ನಿಟ್ಟಿನಲ್ಲಿ ಕರ್ನಾಟಕಕ್ಕೆ ಜಯ ಸಿಕ್ಕಿದ್ದು ರಾಜ್ಯಕ್ಕೆ 3,454 ಕೋಟಿ ರೂ. ಬರ ಪರಿಹಾರವನ್ನ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
ರಾಜ್ಯದಲ್ಲಿ ಬರಗಾಲ ಆವರಿಸಿದ ಹಿನ್ನೆಲೆ ರಾಜ್ಯಕ್ಕೆ 18,174 ಕೋಟಿ ರೂ. ಬರಪರಿಹಾರ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಸರ್ಕಾರ ಸೆಪ್ಟಂಬರ್ ನಲ್ಲೇ ಬೇಡಿಕೆ ಇಟ್ಟಿತ್ತು. ಬರಪರಿಹಾರ ನೀಡಲು ಕೇಂದ್ರ ವಿಳಂಬ ಹಿನ್ನೆಲೆ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಕೇಂಧ್ರ ಸರ್ಕಾರ ವಾರದೊಳಗೆ ಬರ ಪರಿಹಾರ ಬಿಡುಗಡೆ ಮಾಡುವುದಾಗಿ ಸುಪ್ರೀಂಕೋರ್ಟ್ ಗೆ ತಿಳಿಸಿತ್ತು.
ಇದೀಗ ಇಂದು ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ಘೋಷಣೆ ಮಾಡಿದೆ. ಹಾಗೆಯೇ ತಮಿಳುನಾಡಿಗೆ 275 ಕೋಟಿ ರೂ ಪರಿಹಾರವನ್ನ ಘೋಷಣೆ ಮಾಡಿದೆ.
Key words: 3,454 crore, drought relief, Karnataka
Next Article