HomeBreaking NewsLatest NewsPoliticsSportsCrimeCinema

ಕರ್ನಾಟಕದ “5-G”  ಸ್ಕೀಂ ಅಭಾದಿತ : ಡಾ.ಪುಷ್ಪಾ ಅಮರನಾಥ್‌

03:34 PM Aug 26, 2024 IST | mahesh

 

5 guarantees that will make you a household name in the country, popularly known as the 5G programme across the country. Speculations have arisen about this. People don't have to worry about this. Cm Siddaramaiah has already said. There is no question of guarantees being stopped for any reason.

 

ಮೈಸೂರು, ಆ.26,2024: (www.justkannada.in news) ದೇಶದಲ್ಲಿ ಮನೆ ಮಾತಾಗಿಡುವ 5 ಗ್ಯಾರಂಟಿಗಳು, ದೇಶಾದ್ಯಂತ 5 ಜಿ ಪ್ರೋಗ್ರಾ ಎಂದೇ ಖ್ಯಾತಿಯಾಗಿವೆ. ಇದರ ಬಗ್ಗೆ ಊಹಾಪೋಹಗಳು ಹುಟ್ಟಿಕೊಂಡಿವೆ. ಇದರ ಬಗ್ಗೆ ಜನರು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಗ್ಯಾರಂಟಿಗಳು ಯಾವುದೇ ಕಾರಣಕ್ಕೂ ನಿಲ್ಲಿಸುವ ಮಾತೇ ಇಲ್ಲ.

ಗ್ಯಾರಂಟಿ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷೆ ಪುಷ್ಪ ಅಮರನಾಥ್ ನೇತೃತ್ವದಲ್ಲಿ  ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ಸುದ್ದಿ ಗೋಷ್ಠಿ.

ರಾಜ್ಯಪಾಲರ ಭಾಷಣದಲ್ಲೇ ಹೇಳಿದ್ದಾರೆ , ಗ್ಯಾರಂಟಿ ಯೋಜನೆಗಳಿಂದ  4.6 ಕೋಟಿ ಜನರಿಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರು, ಉಪಾಧ್ಯಕ್ಷರ  ನೇತೃತ್ವದಲ್ಲಿ ಜನರಿಗೆ ಯೋಜನೆಗಳು ತಲುಪಿದೆಯಾ  ಎಂಬ ಬಗ್ಗೆ ಒಂದು ಸಮಿತಿ ಮಾಡಿ ಪರಿಶೀಲನೆ ಮಾಡಲಾಗುತ್ತದೆ.

ಟೋಲ್‌ ಫ್ರೀ ನಂಬರ್:‌

ಗ್ಯಾರಂಟಿ ಯೋಜನೆಗಳನ್ನ ಯಾರಾದರೂ ದುರುಪಯೋಗ ಪಡಿಸಿಕೊಂಡರೆ  8277000555  ಟೋಲ್ ಫ್ರೀ ನಂಬರ್ ಕರೆ ಮಾಡಿ ಸುದ್ದಿ ಗೋಷ್ಠಿಯಲ್ಲಿ ಪುಷ್ಪ ಅಮರನಾಥ್ ಹೇಳಿಕೆ.

ಗೃಹಲಕ್ಷ್ಮಿ ಯೋಜನೆಯಲ್ಲಿ ಸ್ವಲ್ಪ ತಾಂತ್ರಿಕ ದೋಷ ಉಂಟಾಗಿತ್ತು ಈಗ ಅದೂ ಕೂಡ ಸರಿಯಾಗಿದೆ. ನೇರವಾಗಿ ಅವರವರ ಖಾತಗೆ ಹಣ ಬರ್ತಾ ಇದೆ. ನುಡಿದಂತೆ ನಡೆದ ಸರ್ಕಾರದ ನಮ್ಮದು.

ಈಗ ಕೆಲವರು  ಆರ್ಥಿಕವಾಗಿ ಸಬಲರಾಗಿರುವವರೂ ಕೂಡ ಈ ಯೋಜನೆಗಳನ್ನ ಪಡೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅದನ್ನ ಪರಿಶೀಲನೆ ಮಾಡುವ ಕೆಲಸವನ್ನು ಮಾಡುತ್ತೇವೆ. ಅಂತವರಿಗೆ ಕಡಿತ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತದೆ ಎಂದರು.

ಸಿಎಂ ಬದಲಾವಣೆ ಮಾತೇ ಇಲ್ಲ :

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಸಿಎಂ ಆಗಿ ಮುಂದುವರಿಯುತ್ತಾರೆ. ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡುವ ತಪ್ಪುನ್ನು ಮಾಡಿಲ್ಲ. ರಾಜ್ಯಪಾಲರು ತಮ್ಮ ಸಾಂವಿಧಾನಿಕ ಹುದ್ದೆಗೆ ದ್ರೋಹ ಮಾಡುತ್ತಿದ್ದಾರೆ. ಪ್ರಾಸಿಕ್ಯೂಸನ್ ಅನುಮತಿ ನೀಡಿ ತಾರತಮ್ಯ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಆರು ವಿಧೆಯಕಗಳಿಗೂ ಸಹಿ ಹಾಕದೆ ವಾಪಸ್ ಕಳುಹಿಸಿದ್ದಾರೆ. ನಿಜವಾಗಿಯೂ ರಾಜ್ಯಪಾಲರ ನಡೆ ಖಂಡನೀಯ. ಮೈಸೂರಿನಲ್ಲಿ ಕಾಂಗ್ರೆಸ್ ಮುಖಂಡೆ ಪುಷ್ಪ ಅಮರನಾಥ್ ಹೇಳಿಕೆ.

ಬೇಸರ:

ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ನಡೆಯುತ್ತಿದೆ. ಈ ಸಮಾಜ ಎತ್ತ ಸಾಗುತ್ತಿದೆ,ಮಹಿಳಾ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಸುದ್ದಿ ಗೋಷ್ಠಿಯಲ್ಲಿ ಮಹಿಳೆಯರ ಮೇಲೆನ ದೌರ್ಜನ್ಯ ಪ್ರಕರಣಗಳ ಹೆಚ್ಚಳಕ್ಕೆ ಬೇಸರ ವ್ಯಕ್ತ ಪಡಿಸಿದ ಪುಷ್ಪ ಅಮರನಾಥ್.

ಸುದ್ದಿ ಗೋಷ್ಠಿಯಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಕುಮಾರ್,ಕೆ.ಮಾರುತಿ ಸೇರಿದಂತೆ ಹಲವಾರು ಭಾಗಿ.

key words:  Karnataka's, "5-G" scheme, not affected, Dr Pushpa Amarnath

SUMMARY:

5 guarantees that will make you a household name in the country, popularly known as the 5G programme across the country. Speculations have arisen about this. People don't have to worry about this. Cm Siddaramaiah has already said. There is no question of guarantees being stopped for any reason.

Tags :
"5-G" schemeDr Pushpa AmarnathKarnataka'snot affected
Next Article