ಕಾಂಗ್ರೆಸ್ ನ 50 ಶಾಸಕರು ಬಿಜೆಪಿ ಹೈಕಮಾಂಡ್ ಜೊತೆ ಸಂಪರ್ಕದಲ್ಲಿದ್ದಾರೆ-ಹೊಸಬಾಂಬ್ ಸಿಡಿಸಿದ ಮಾಜಿ ಸಚಿವ ಮುರುಗೇಶ್ ನಿರಾಣಿ.
02:08 PM Nov 04, 2023 IST
|
prashanth
ವಿಜಯಪುರ,ನವೆಂಬರ್,4,2023(www.justkannada.in): ಕಾಂಗ್ರೆಸ್ ನ 50 ಶಾಸಕರು ಬಿಜೆಪಿ ಹೈಕಮಾಂಡ್ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೊಸಬಾಂಬ್ ಸಿಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಮುರುಗೇಶ್ ನಿರಾಣಿ, ರಾಜ್ಯ ಕಾಂಗ್ರೆಸ್ ನಲ್ಲಿ ಎರಡಲ್ಲ, ನಾಲ್ಕು ಬಣಗಳಿವೆ. ನಾವು ಸರ್ಕಾರವನ್ನು ಬೀಳಿಸುವುದಿಲ್ಲ. ತಾನಾಗೇ ಸರ್ಕಾರ ಪತನವಾಗುತ್ತದೆ. ಕಾಂಗ್ರೆಸ್ ನ 50ಶಾಸಕರು ಬಿಜೆಪಿ ಹೈಕಮಾಂಡ್ ಜೊತೆಗೆ ಸಂಪರ್ಕದಲ್ಲಿದ್ದಾರೆ . 5 ವರ್ಷ ಅಧಿಕಾರದಲ್ಲಿರೋದು ಅನುಮಾನ ಎಂದು ತಿಳಿಸಿದರು.
ಡಿಸಿಎಂ ಆಕಾಂಕ್ಷಿ ಸಚಿವರು, ಸಚಿವ ಸ್ಥಾನ ವಂಚಿತ ಶಾಸಕರು, ಅಸಮಾಧಾನಿತ ಶಾಸಕರು ಸಂಪರ್ಕದಲ್ಲಿದ್ದಾರೆ. ಅವರೇ ಬಂದು ಬಾಗಿಲು ತಟ್ಟುತ್ತಿದ್ದಾರೆ. ನಾವು ಸರ್ಕಾರ ಕೆಡವಲ್ಲ, ತಾನಾಗಿಯೇ ಕಾಂಗ್ರೆಸ್ ಸರ್ಕಾರ ಬಿದ್ದೋಗುತ್ತದೆ ಎಂದು ಮುರುಗೇಶ್ ನಿರಾಣಿ ಭವಿಷ್ಯ ನುಡಿದರು.
Key words: 50 Congress MLAs - touch - BJP -High Command- Former minister -Murugesh Nirani
Next Article