JUST 14 ಸೈಟಿನ ವಿಷಯವಲ್ಲ: ಅಕ್ರಮವಾಗಿ ಹಂಚಿರುವ 5000 ನಿವೇಶನ ಮುಟ್ಟುಗೋಲು ಹಾಕಿಕೊಳ್ಳಬೇಕು : ವಿಶ್ವನಾಥ್
The joint syndicate of officials and public representatives in the Mysuru Urban Development Authority (MUDA) has alleged corruption to the tune of over Rs. 5,000 crore. "In 2019, there were 9,000 plots in muda. Of these, more than 5,000 sites have been allotted illegally. Vishwanath alleged that the plots were allotted illegally during the tenure of the previous BJP and the present Congress government.
ಮೈಸೂರು, ಆ.17,2024: (www.justkannada.in news) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ೧೪ ನಿವೇಶನಗಳು ಮಾತ್ರವಲ್ಲ, ಮುಡಾದಿಂದ ಅಕ್ರಮವಾಗಿ ಹಂಚಿಕೆಯಾಗಿರುವ 5 ಸಾವಿರಕ್ಕೂ ಹೆಚ್ಚು ನಿವೇಶನಗಳ ಬಗೆಗೂ ಈಗ ತನಿಖೆಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಗ್ರಹಿಸಿದರು.
ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ , ಹಗರಣದ ಬಗ್ಗೆ ಮೊದಲಿಗೆ ಬೆಳಕು ಚೆಲ್ಲಿದ ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಅವರನ್ನು “ ಜಸ್ಟ್ ಕನ್ನಡ “ ಜತೆ ಮಾತನಾಡಿ ಹೇಳಿದಿಷ್ಟು..
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜಂಟಿ ಸಿಂಡಿಕೇಟ್‌ನಿಂದ ಅಂದಾಜು 5 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆದಿದೆ. ''2019ರಲ್ಲಿ ಮುಡಾ ಸುಪರ್ದಿಯಲ್ಲಿ 9 ಸಾವಿರ ನಿವೇಶನಗಳಿದ್ದವು. ಈ ಪೈಕಿ 5 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಹಿಂದಿನ ಬಿಜೆಪಿ ಹಾಗೂ ಈಗಿನ ಕಾಂಗ್ರೆಸ್ ಸರ್ಕಾರ ದ ಅವಧಿಯಲ್ಲಿ ನಿಯಮ ಬಾಹಿರವಾಗಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ವಿಶ್ವನಾಥ್ ದೂರಿದರು.
ಮುಡಾದಲ್ಲಿ ನಿವೇಶನಗಳನ್ನು ಅಕ್ರಮವಾಗಿ ಹಂಚಿ, ಅಧಿಕಾರಿಯಿಂದಲೇ ಸರ್ಕಾರಕ್ಕೆ ನೂರಾರು ಕೋಟಿ ರೂಪಾಯಿ ನಷ್ಟ ಉಂಟುಮಾಡಲಾಗಿದೆ. ಮುಡಾ ಆಯುಕ್ತರಾಗಿದ್ದ ನಟೇಶ್, ದಿನೇಶ್ ಆಡಳಿತ ವೈಖರಿ ಖಂಡಿಸಿದ ವಿಶ್ವನಾಥ್, ಈ ಇಬ್ಬರು ಅಧಿಕಾರಿಗಳೇ ಮುಡಾದ ಅಧೋಗತಿಗೆ ಪ್ರಮುಖ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನಪ್ರತಿನಿಧಿಗಳ ಜತೆಗೆ ಶಾಮೀಲಾಗಿ, ಅಂದಾಜು ಐದು ಸಾವಿರಕ್ಕೂ ಹೆಚ್ಚು ನಿವೇಶನಗಳು ಈ ಇಬ್ಬರ ಅವಧಿಯಲ್ಲಿ ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಮೈಸೂರಿನ ಇತಿಹಾಸದಲ್ಲಿಯೇ ಮುಡಾದಲ್ಲಿ ಭಾರೀ ಪ್ರಮಾಣದ ಭೂದರೋಡೆ ಮಾಡಲಾಗಿದೆ.
ಬದಲಿ ನಿವೇಶನ ನೀಡದಂತೆ ಎರಡು ವರ್ಷದ ಹಿಂದೆಯೇ ಸರ್ಕಾರ ಆದೇಶ ಮಾಡಿ, ಅತಿ ಅಗತ್ಯ ಬಿದ್ದರೆ ಮಾತ್ರ ಸರ್ಕಾರ ಅನುಮತಿ ಪಡೆದು ಹಂಚಿಕೆಗೆ ತಾಕೀತು ಮಾಡಿದ್ದರೂ ಸರ್ಕಾರ ದ ನಿಯಮಗಳನ್ನು ಉಲ್ಲಂಘನೆ ಮಾಡಿ ನಿಯಮ ಬಾಹಿರವಾಗಿ, ಬದಲಿ ನಿವೇಶನ ಹಂಚಿಕೆ ಮಾಡಿ ಸುಮಾರು 3 ಸಾವಿರ ಕೋಟಿ ರೂ. ಹಗರಣ ನಡೆದಿದೆ.
ಬಂಧಿಸಿ ಜೈಲಿಗಟ್ಟಿ :
ಮುಡಾದ ಕರ್ಮಕಾಂಡದ ರೂವಾರಿಗಳಾದ, ಈ ಹಿಂದಿನ ಮುಡಾ ಆಯುಕ್ತರಾದ ನಟೇಶ್ ಹಾಗೂ ದಿನೇಶ್ ಅವರಿಬ್ಬರನ್ನು ಈ ಕೂಡಲೇ ಬಂಧಿಸಬೇಕು. ಹಗರಣಕ್ಕೆ ಸಂಬಂಧಿಸಿದಂತೆ ಅವರ ಬಳಿ ಇರುವ ದಾಖಲೆಗಳನ್ನು ವಶಕ್ಕೆ ಪಡೆದು, ಅಕ್ರಮವಾಗಿ ಹಂಚಿಕೆಯಾಗಿರುವ ನಿವೇಶಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ವಿಶ್ವನಾಥ್ ಒತ್ತಾಯಿಸಿದರು.
KEY WORDS: Not just 14 sites, 5000 plots, allotted illegally, should be confiscated, Vishwanath
SUMMARY:
MLC H Vishwanath demanded a probe not only into the 14 sites of Chief Minister Siddaramaiah but also more than 5,000 sites illegally allotted by MUDA.
The joint syndicate of officials and public representatives in the Mysuru Urban Development Authority (MUDA) has alleged corruption to the tune of over Rs. 5,000 crore. "In 2019, there were 9,000 plots in muda. Of these, more than 5,000 sites have been allotted illegally. Vishwanath alleged that the plots were allotted illegally during the tenure of the previous BJP and the present Congress government.