5,8,9,11ನೇ ತರಗತಿ ಬೋರ್ಡ್ ಪರೀಕ್ಷೆ ಫಲಿತಾಂಶಕ್ಕೆ ಸುಪ್ರೀಂಕೋರ್ಟ್ ತಡೆ.
12:15 PM Apr 08, 2024 IST
|
prashanth
ನವದೆಹಲಿ,ಏಪ್ರಿಲ್,8,2024 (www.justkannada.in): ರಾಜ್ಯದಲ್ಲಿ ಶಿಕ್ಷಣ ಇಲಾಖೆ ನಡೆಸಿದ್ದ5,8,9,11ನೇ ತರಗತಿ ಬೋರ್ಡ್ ಪರೀಕ್ಷೆ ಫಲಿತಾಂಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ಮಾರ್ಚ್ ನಲ್ಲಿ ಶಿಕ್ಷಣ ಇಲಾಖೆ ಬೋರ್ಡ್ 5,8,9,11ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಿತ್ತು. ಈ ನಡುವೆ ಬೋರ್ಡ್ ಪರೀಕ್ಷೆ ನಡೆಸದಂತೆ ಕೋರಿ ರುಪ್ಸಾ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಮೌಲ್ಯಮಾಪನ ಬೇಕಾಬಿಟ್ಟಿ ಮಾಡಲಾಗಿದೆ. ಮೌಲ್ಯ ಮಾಪನದಲ್ಲಿ ದೋಷವಾಗಿದೆ ಎಂದು ರುಪ್ಸಾ ಆರೋಪಿಸಿತ್ತು.
ಇದೀಗ ಬೋರ್ಡ್ ಎಕ್ಸ್ ನ ಫಲಿತಾಂಶ ಪ್ರಕಟಿಸದಂತೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
Key words: 5th, 8th, 9th, 11th- class board -exam –results- stay - Supreme Court.
Next Article