ಮೈಸೂರಿನಲ್ಲಿ ಒಟ್ಟು 7 ಕೋವಿಡ್ ಪ್ರಕರಣ: ಒಳಾಂಗಣ ಕಾರ್ಯಕ್ರಮದಲ್ಲಿ ಮಾಸ್ಕ್ ಕಡ್ಡಾಯ- ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ.
ಮೈಸೂರು,ಡಿಸೆಂಬರ್,23,2023(www.justkannada.in): ಕೋವಿಡ್ ಭೀತಿ ಹಿನ್ನೆಲೆ 60 ವರ್ಷ ಮೇಲ್ಪಟ್ಟವರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಒಳಾಂಗಣ ಕಾರ್ಯಕ್ರಮದಲ್ಲಿ ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು ಎಂದು ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ತಿಳಿಸಿದ್ದಾರೆ.
ಇಂದು ಮಾತನಾಡಿದ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ, ಮೈಸೂರಿನಲ್ಲಿ ಒಟ್ಟು 7 ಕೊರೋನಾ ಪ್ರಕರಣಗಳು ಪತ್ತೆಯಾಗಿದೆ. 7ನೇ ಪ್ರಕರಣ ಸಹ ಅನಾರೋಗ್ಯದಿಂದ ಬಳಲುತ್ತಿದ್ದವರಾಗಿದ್ದಾರೆ. ಯಾರಿಗೂ ಟ್ರಾವೆಲ್ ಹಿಸ್ಟರಿ ಇಲ್ಲ. ಆದ್ದರಿಂದ ಆತಂಕ ಪಡುವ ಅಗತ್ಯ ಇಲ್ಲ ಎಂದರು.
ಸದ್ಯ ಮೈಸೂರಿನಲ್ಲಿ 70 ಟೆಸ್ಟಿಂಗ್ ಮಾಡಲಾಗುತ್ತಿದ್ದು, ರೋಗ ಲಕ್ಷಣ ಇದ್ದವರಿಗೆ ಮಾತ್ರ ಟೆಸ್ಟಿಂಗ್ ಮಾಡಲಾಗುತ್ತಿದೆ. 1 ಸಾವಿರ ಟೆಸ್ಟಿಂಗ್ ಮಾಡುವ ಸಾಮರ್ಥ್ಯ ನಮಗಿದೆ. ಸದ್ಯ ಪ್ರವಾಸಿ ತಾಣಗಳಲ್ಲಿ ಟೆಸ್ಟಿಂಗ್ ಮಾಡುವ ಅವಶ್ಯಕತೆ ಇಲ್ಲ. ಹೊಸ ವರ್ಷದ ಆಚರಣೆಗೂ ಯಾವುದೇ ನಿರ್ಬಂಧ ಇಲ್ಲ. ಇನ್ನು ಗಡಿ ಭಾಗದಲ್ಲಿ ನಿಗಾ ಇರಿಸಲಾಗಿದೆ ಎಂದು ಡಾ. ಕೆ.ವಿ ರಾಜೇಂದ್ರ ಹೇಳಿದರು.
Key words: 7 Covid cases - Mysore- DC-Dr. KV Rajendra