For the best experience, open
https://m.justkannada.in
on your mobile browser.

ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದ 78ನೇ ಸ್ವಾತಂತ್ರ್ಯೋತ್ಸವ: ಗಳಿಕೆ, ಮೂಲಸೌಕರ್ಯ, ಸುರಕ್ಷತೆಗೆ ಆದ್ಯತೆ

01:13 PM Aug 15, 2024 IST | prashanth
ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದ 78ನೇ ಸ್ವಾತಂತ್ರ್ಯೋತ್ಸವ  ಗಳಿಕೆ  ಮೂಲಸೌಕರ್ಯ  ಸುರಕ್ಷತೆಗೆ ಆದ್ಯತೆ

ಮೈಸೂರು,ಆಗಸ್ಟ್,15,2024 (www.justkannada.in): ನೈಋತ್ಯ ರೈಲ್ವೆ ಮೈಸೂರು ವಿಭಾಗದಲ್ಲಿ ಗಳಿಕೆ, ಮೂಲಸೌಕರ್ಯ, ಸುರಕ್ಷತೆಗೆ ಆದ್ಯತೆ ನೀಡಲಾಗಿದೆ ಎಂದು ಮೈಸೂರಿನ ವಿಭಾಗೀಯ ರೈಲ್ವೆ  ವ್ಯವಸ್ಥಾಪಕರಾದ ಶಿಲ್ಪಿ ಅಗರ್ವಾಲ್ ತಿಳಿಸಿದರು.

ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮೈಸೂರಿನ ಯಾದವಗಿರಿಯ ರೈಲ್ವೆ  ಕ್ರೀಡಾ ಮೈದಾನದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಿಲ್ಪಿ ಅಗರ್ವಾಲ್ ಅವರು,  ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಮ್ಮ ಪೂರ್ವಜರು ಮಾಡಿದ ತ್ಯಾಗವನ್ನು ಸ್ಮರಿಸುವುದರ ಮಹತ್ವವನ್ನು ಅವರು ಒತ್ತಿ ಹೇಳಿದರು.ಗಳಿಕೆ ಮತ್ತು ಸರಕು ಸಾಗಣೆಯಲ್ಲಿ ವಿಭಾಗದ ಗಮನಾರ್ಹ ಸಾಧನೆಗಳನ್ನು ಎತ್ತಿ ತೋರಿಸಿದರು.

ಮೈಸೂರು ವಿಭಾಗವು 6.7 ದಶಲಕ್ಷ ಟನ್ ಸರಕು ಸಾಗಣೆಯನ್ನು ದಾಖಲಿಸಿದ್ದು, ₹542.39 ಕೋಟಿಗಳಷ್ಟು ಗಣನೀಯ ಆದಾಯವನ್ನು ಗಳಿಸಿದೆ. ವಿಭಾಗವು ‘ನೆಟ್ ಟನ್ ಕಿ.ಮಿ’. (NTKM) ಗಳಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ 6.2% ಸುಧಾರಣೆಯನ್ನು ಕಂಡಿದ್ದು, 1595.7 ದಶಲಕ್ಷ ತಲುಪಿದೆ. ಹಾಗೆಯೆ ‘ಗ್ರಾಸ್ ಟನ್ ಕಿಲೋಮೀಟರ್ಸ್’ (GTKM)ನಲ್ಲಿ 2.2% ಹೆಚ್ಚಳವನ್ನು ಕಂಡಿದ್ದು, 2673 ದಶಲಕ್ಷ ತಲುಪಿದೆ. ಗಮನಾರ್ಹವಾಗಿ, ವಿಭಾಗವು 19 ರೇಕ್‌ಗಳ ಕಬ್ಬಿಣದ ಅದಿರನ್ನು ಯಶಸ್ವಿಯಾಗಿ ರಫ್ತು ಮಾಡಿ ₹ 57.06 ಕೋಟಿ ಗಳಿಸಿದೆ ಮತ್ತು ಆಟೋಮೊಬೈಲ್ ಲೋಡಿಂಗ್‌ನಲ್ಲಿ ಗಮನಾರ್ಹ ಸುಧಾರಣೆಯನ್ನು ಕಂಡಿದ್ದೂ, 12 ರೇಕ್‌ಗಳನ್ನು ಲೋಡ್ ಮಾಡಲಾಗಿದೆ. ಇದು ಹಿಂದಿನ ವರ್ಷಕ್ಕಿಂತ 183.3% ಹೆಚ್ಚಳವಾಗಿದೆ.

ಪ್ರಯಾಣಿಕರ ಸೇವೆಗಳ ವಿಷಯದಲ್ಲಿ ವಿಭಾಗವು 19.02 ದಶಲಕ್ಷ ಪ್ರಯಾಣಿಕರನ್ನು ಸಾಗಿಸಿದ್ದು ₹242.89 ಕೋಟಿ ಆದಾಯವನ್ನು ಗಳಿಸಿದೆ. ಹಲವಾರು ಸುರಕ್ಷತಾ ನಿರ್ವಹಣೆ ಮತ್ತು ಮೂಲಸೌಕರ್ಯ ಅಭಿವೃದ್ದಿ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದರೂ ಸಹ ಜುಲೈ 2024 ರವರೆಗೆ ವಿಭಾಗದ ಸಮಯಪಾಲನೆಯ ಕಾರ್ಯಕ್ಷಮತೆಯು ಶ್ಲಾಘನೀಯ 94% ನಲ್ಲಿದೆ ಎಂದು ಅಗರ್ವಾಲ್ ತಿಳಿಸಿದರು.

ಈ ವೇಳೆ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರುಗಳಾದ ವಿನಾಯಕ್ ನಾಯ್ಕ್ ಮತ್ತು ಇ.ವಿಜಯಾ ಹಾಗೂ ಇತರ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Key words: 78th Independence Day, South Western Railway, Mysore Division

Tags :

.