HomeBreaking NewsLatest NewsPoliticsSportsCrimeCinema

ಭೀಕರ ರಸ್ತೆ ಅಪಘಾತದಲ್ಲಿ 8 ಮಂದಿಗೆ ಗಾಯ: ಸಮಯಕ್ಕೆ ಸರಿಯಾಗಿ ಬಾರದ ಆ್ಯಂಬುಲೆನ್ಸ್.

04:57 PM Feb 21, 2024 IST | prashanth

ಚಾಮರಾಜನಗರ,ಫೆಬ್ರವರಿ,21,2024(www.justkannada.in):   ಚಾಮರಾಜನಗರ ಜಿಲ್ಲ ಗುಂಡ್ಲುಪೇಟೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 766 ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ 8 ಮಂದಿಗೆ ಗಾಯಗಳಾಗಿದ್ದು, ಸಮಯಕ್ಕೆ ಸರಿಯಾಗಿ ಬಾರದ ಆ್ಯಂಬುಲೆನ್ಸ್ ಹಿನ್ನೆಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಬೇಗೂರು ಕಡೆಯಿಂದ ನಂಜನಗೂಡು ಕಡೆಗೆ ಹೋಗುತಿದ್ದ ಪ್ಯಾಸೆಂಜರ್ ಆಟೋ ಹಾಗೂ ಮೈಸೂರು ಕಡೆಯಿಂದ ಬರುತಿದ್ದ TN 13 Z0554 ಮಾರುತಿ ಆಲ್ಟೋ ಕಾರಿನ ನಡುವೆ ಚಿಕ್ಕಹುಂಡಿ ಗೇಟ್ ಬಳಿ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು  ಡಿಕ್ಕಿ ಹೊಡೆದ ರಭಸಕ್ಕೆ ಪ್ಯಾಸೆಂಜರ್ ಆಟೋದಲ್ಲಿದ್ದ 8 ಜನ ಪ್ರಯಾಣಿಕರಿಗೆ ಗಾಯಗಳಾಗಿದೆ.  ಈ ಪೈಕಿ ಮೂವರ ಸ್ಥಿತಿ ತುಂಬಾ ಗಂಭೀರವಾಗಿದ್ದು, ಮೂವರನ್ನು ಮೈಸೂರಿನ KR ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬೇಗೂರು ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ವಣರಾಜು, ಸಬ್ ಇನ್ಸ್‌ಪೆಕ್ಟರ್ ಚರಣ್ ಗೌಡ ಆಗಮಿಸಿದರು.  ಈ ವೇಳೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ಗೆ ಕರೆ ಮಾಡಿದರೂ ಆ್ಯಂಬುಲೆನ್ಸ್ ಸರಿಯಾದ ಸಮಯಕ್ಕೆ ಬರಲಿಲ್ಲ. ಪರಿಣಾಮ ಪೊಲೀಸರು ತಮ್ಮದೇ ಠಾಣೆಯ ಮೂರು ವಾಹನಗಳಲ್ಲಿ ಗಾಯಾಳುಗಳನ್ನು ಬೇಗೂರು ಆಸ್ಪತ್ರೆಗೆ ರವಾನಿಸಿದರು.

ಸಮಯಕ್ಕೆ ಸರಿಯಾಗಿ ಬಾರದ ಆ್ಯಂಬುಲೆನ್ಸ್ ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.  ಸಂಬಂದಪಟ್ಟ ಅಧಿಕಾರಿಗಳಿಗೆ ಫೋನ್ ಮಾಡಿ ವಿಷಯ ತಿಳಿಸಿದರೂ ನಮಗೆ ಏನು ಗೊತ್ತಿಲ್ಲ ಎಂಬಂತೆ 108ರ ಸಿಬ್ಬಂದಿಗಳು ವರ್ತಿಸುತ್ತಿದ್ದರು ಎಂದು ಸಾರ್ವಜನಿಕರು ಕಿಡಿಕಾರಿದರು.

Key words: 8 injured - road accident- Ambulance -not arriving- on time.

Tags :
8 injured - road accident- Ambulance -not arriving- on time.
Next Article