For the best experience, open
https://m.justkannada.in
on your mobile browser.

ಉತ್ತರಖಂಡ್ ನಲ್ಲಿ 9 ಚಾರಣಿಗರು ಸಾವು: ಇಂದೇ ಏರ್ ಲಿಫ್ಟ್-ಸಚಿವ ಕೃಷ್ಣಬೈರೇಗೌಡ.

11:43 AM Jun 06, 2024 IST | prashanth
ಉತ್ತರಖಂಡ್ ನಲ್ಲಿ 9 ಚಾರಣಿಗರು ಸಾವು  ಇಂದೇ ಏರ್ ಲಿಫ್ಟ್ ಸಚಿವ ಕೃಷ್ಣಬೈರೇಗೌಡ

ಉತ್ತರಖಂಡ್,ಜೂನ್,6,2024 (www.justkannada.in): ಉತ್ತರಾಖಂಡ್ ನ ಉತರ ಕಾಶಿ ಜಿಲ್ಲೆಯ ಸಹಸ್ರತಾಲ್ ಟ್ರೆಕ್ಕಿಂಗ್ ವೇಳೆ ಹವಾಮಾನ ವೈಫರೀತ್ಯದಿಂದ 9  ಚಾರಣಿಗರು ಸಾವನ್ನಪ್ಪಿದ್ದು ಇಂದೇ ಬೆಂಗಳೂರಿಗೆ ಮೃತದೇಹಗಳನ್ನ ಏರ್ ಲಿಫ್ಟ್ ಮಾಡುತ್ತೇವೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಕರ್ನಾಟಕದ ಚಾರಣಿಗರು ಸಹಸ್ರತಾಲ್  ನಲ್ಲಿ ಟ್ರೆಕ್ಕಿಂಗ್ ವೇಳೆ  ಸಂಕಷ್ಟಕ್ಕೆ ಸಿಲುಕಿದ್ದರು.  ಒಟ್ಟು 9 ಚಾರಣಿಗರು ಸಾವನ್ನಪ್ಪಿದ್ದಾರೆ ಎಂದು ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ. ಸಿಎಂ ಸೂಚನೆ ಮೇರೆಗೆ ಉತ್ತರಖಂಡ್ ಗೆ ಸಚಿವ ಕೃಷ್ಣಬೈರೇಗೌಡ ತೆರಳಿದ್ದರು.

ಈ ಕುರಿತು ಮಾತನಾಡಿರುವ ಅವರು,  ರಕ್ಷಣೆ ಮಾಡಿರುವ 11 ಜನರನ್ನ ಸುರಕ್ಷಿತ ಪ್ರದೇಶಕ್ಕೆ  ಸ್ಥಳಾಂತರ ಮಾಡಲಾಗಿದೆ.  8 ಜನರನ್ನ ಡೆಹ್ರಾಡೂನ್ ಗೆ ಸ್ಥಳಾಂತರ, ಐವರನ್ನ ಉತ್ತರ ಕಾಶಿ ಸ್ಥಳಾಂತರ ಮಾಡಲಾಗಿದೆ . ನಿನ್ನೆ ಐವರು ಚಾರಣಿಗರ ಮೃತದೇಹ  ಸ್ಥಳಾಂತರ ಮಾಡಲಾಗಿದೆ ಇಂದು ಬೆಳಿಗ್ಗೆ ನಾಲ್ಬರ ಮೃತದೇಹ ಸ್ಥಳಾಂತರಿಸಲಾಗಿದೆ.  ಇಂದೇ 9 ಮೃತದೇಹಗಳನ್ನ ಬೆಂಗಳೂರಿಗೆ ಏರ್ ಲಿಫ್ಟ್  ಮಾಡಲಾಗುತ್ತದೆ ಎಂದು ತಿಳಿಸಿದರು.

Key words: 9 trekkers, die, Uttarakhand, Krishnabyre Gowda

Tags :

.