HomeBreaking NewsLatest NewsPoliticsSportsCrimeCinema

ರಾಜ್ಯದಲ್ಲಿ 92 ಸಕ್ರಿಯ ಕೋವಿಡ್ ಪ್ರಕರಣಗಳು; ದಿನನಿತ್ಯ 5 ಸಾವಿರ ಟೆಸ್ಟಿಂಗ್ ಗೆ ಸೂಚನೆ-ಸಿಎಂ ಸಿದ್ದರಾಮಯ್ಯ.

02:51 PM Dec 21, 2023 IST | prashanth

ಬೆಂಗಳೂರು,ಡಿಸೆಂಬರ್,21,2023(www.justkannada.in):  ರಾಜ್ಯದಲ್ಲಿ 92 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ಬೆಂಗಳೂರು ನಗರದಲ್ಲೇ 80 ಕೋವಿಡ್ ಪ್ರಕರಣಗಳಿವೆ. 20 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೊರೋನಾ ಬಗ್ಗೆ ಭಯಪಡುವ  ಅಗತ್ಯವಿಲ್ಲ. ಆದ್ರೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. 60 ವರ್ಷಕ್ಕಿಂತ ಮೇಲ್ಪಟ್ಟವರು  ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಹೆಚ್ಚು ಜನರ ಸಂಪರ್ಕಕ್ಕೆ ಬರುವವರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು  ಮಾಸ್ಕ್ ಕಡ್ಡಾಯ ಮಾಡೋ ಪರಿಸ್ಥಿತಿ ಸದ್ಯಕ್ಕೆ ಇಲ್ಲ. ಸಲಹೆ ಅಷ್ಟೆ ಎಂದರು.

ರಾಜ್ಯದಲ ಗಡಿ ಭಾಗದಲ್ಲಿ ಟೆಸ್ಟಿಂಗ್ ಹೆಚ್ಚಿಸಲು ಸೂಚನೆ ನೀಡಲಾಗಿದೆ. ಪ್ರತಿನಿತ್ಯ 5 ಸಾವಿರ ಟೆಸ್ಟಿಂಗ್ ಮಾಡಲು ಸೂಚನೆ ನೀಡಲಾಗಿದೆ. ಅಗತ್ಯ ಉಪಕರಣಗಳನ್ನು  ಸಿದ್ದಪಡಿಸಿಕೊಳ್ಳಿ ಎಂದು ಸೂಚನೆ ನೀಡಿದ್ದೇವೆ. ಈ ಹಿಂದೆ ಕೇಂದ್ರವೇ ವ್ಯಾಕ್ಸಿನ್ ನೀಡುತ್ತಿತ್ತು. ಆದರೆ ಅಲ್ಲಿಯವರೆಗೆ ಕಾಯಬೇಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ.  ಆಕ್ಸಿಜನ್ ವೆಂಟಿಲೇಟರ್ ಸಿದ್ದಮಾಡಿಕೊಳ್ಳಿ ಎಂದಿದ್ದೇವೆ ಎಂದು ತಿಳಿಸಿದರು.

Key words: 92 active -covid cases – state- CM -Siddaramaiah.

Tags :
92 active -covid cases – stateCMSiddaramaiah
Next Article