HomeBreaking NewsLatest NewsPoliticsSportsCrimeCinema

ಕರಾಳ ನೆನಪು: ಮುಂಬೈನಲ್ಲಿ ನಡೆದ 26 \11 ಭಯೋತ್ಪಾದಕ ದಾಳಿಗೆ ಹದಿನೈದು ವರ್ಷ

11:22 AM Nov 26, 2023 IST | thinkbigh

ಬೆಂಗಳೂರು, ನವೆಂಬರ್ 26, 2023 (www.justkannada.in): ಮುಂಬೈನಲ್ಲಿ ನಡೆದ 26‌‌ ‌‌\11 ಭಯೋತ್ಪಾದಕ ದಾಳಿಗೆ ಹದಿನೈದು ವರ್ಷ ತುಂಬಿದೆ.

ಹೌದು. ಹದಿನೈದು ವರ್ಷಗಳ ಹಿಂದೆ ಈ ದಿನ (26‌‌ ‌‌\11) ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಗೆ 166 ಜನ ಮೃತಪಟ್ಟಿದ್ದರು.

10 ಭಯೋತ್ಪಾದಕರ ಗುಂಪಿನ ಈ ಸಂಘಟಿತ ದಾಳಿ ಭಾರತ ಮಾತ್ರವಲ್ಲದೆ ಜಗತ್ತಿನೆಲ್ಲೆಡೆ ಸಂಚಲನ ಮೂಡಿಸಿತ್ತು. ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕ ಗುಂಪಿನ ಭಯೋತ್ಪಾದಕರು 2008ರ ನವೆಂಬರ್ 26ರಂದು ರಾತ್ರಿ ಮುಂಬೈ ಪ್ರವೇಶಿಸಿದ್ದರು.

ಏಕಾಏಕಿ ನಡೆಸಿದ ಗುಂಡಿನಲ್ಲಿ ದಾಳಿಯಲ್ಲಿ ನಾಲ್ಕು ದಿನಗಳ ಅವಧಿಯಲ್ಲಿ 166 ಜನರು ಮೃತಪಟ್ಟು 300 ಜನರು ಗಾಯಗೊಂಡಿದ್ದರು.

ತಾಜ್ ಮತ್ತು ಒಬೆರಾಯ್ ಹೊಟೇಲ್‌ಗಳು, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್‌, ನಾರಿಮನ್ ಹೌಸ್‌’ನ ಐಷಾರಾಮಿ ಮಡಿಲಲ್ಲಿ ದುಃಸ್ವಪ್ನವಾದ ದಾಳಿಗೆ ನೂರಾರು ಅಮಾಯಕ ಜೀವಗಳು ಪ್ರಾಣ ಕಳೆದುಕೊಂಡಿದ್ದವು.

ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದ 10 ಭಯೋತ್ಪಾದಕರ ಪೈಕಿ 9 ಮಂದಿ ಛತ್ರಪತಿ ಶಿವಾಜಿ ಟರ್ಮಿನಲ್ ರೈಲ್ವೇ ನಿಲ್ದಾಣದಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟಿದ್ದರು. ಮತ್ತೊಬ್ಬ 'ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್‌'ಗೆ 2010ರಲ್ಲಿ ಮರಣದಂಡನೆ ವಿಧಿಸಿ, 2012ರಲ್ಲಿ ಪುಣೆಯಲ್ಲಿ ಗಲ್ಲಿಗೇರಿಸಲಾಯಿತು.

Tags :
A dark memoryFifteen years since the 26/11 terror attacks in Mumbai
Next Article