HomeBreaking NewsLatest NewsPoliticsSportsCrimeCinema

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಬಂಧನ: ತಂದೆ ಹೃದಯಾಘಾತದಿಂದ ಸಾವು.

10:33 AM Jun 15, 2024 IST | prashanth

ಚಿತ್ರದುರ್ಗ,ಜೂನ್,15,2024 (www.justkannada.in): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ 7ನೇ ಆರೋಪಿ ಅನುಕುಮಾರ್ ನನ್ನು ಪೊಲೀಸರು ಬಂಧಿಸಿದ್ದು, ಮಗನ ಬಂಧನ ವಿಚಾರ ತಿಳಿದು ತಂದೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ಪ್ರಕರಣದ 7ನೇ ಆರೋಪಿ ಅನುಕುಮಾರ್ ನನ್ನು ನಿನ್ನೆ ಚಿತ್ರದುರ್ಗದಲ್ಲಿ ಕಾಮಾಕ್ಷಿಪಾಳ್ಯ ಮತ್ತು ಚಿತ್ರದುರ್ಗ ಠಾಣಾ ಪೊಲೀಸರು ಬಂಧಿಸಿದ್ದರು. ಬಂಧನದ ವಿಚಾರ ತಿಳಿದು ಅನುಕುಮಾರ್ ತಂದೆ ಚಂದ್ರಪ್ಪ(60) ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಕರಣ ಸಂಬಂಧ ನಟ ದರ್ಶನ್ ಹಾಗೂ ಪವಿತ್ರಗೌಡ ಸೇರಿ 16 ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

Key words: Accused, Anukumar, arrest, Father, dies

Tags :
Accused- Anukumar -arrest- Father -dies
Next Article