For the best experience, open
https://m.justkannada.in
on your mobile browser.

ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ನಟ ದರ್ಶನ್ ಪ್ರಚಾರ.

12:34 PM Apr 18, 2024 IST | prashanth
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ನಟ ದರ್ಶನ್ ಪ್ರಚಾರ

ಮಂಡ್ಯ ಏಪ್ರಿಲ್, 18,2024 (www.justkannada.in):  ಮಂಡ್ಯದ ಲೋಕಸಭಾ ಚುನಾವಣಾ ಕಣ ರರಂಗೇರಿದ್ದು,  ಈ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ  ನಟ ಚಾಲೇಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ನಡೆಸಿದ್ದಾರೆ.

ಇತ್ತ ಸುಮಲತಾ ಅಂಬರೀಶ್  ಅವರು ಬಿಜೆಪಿ ಸೇರ್ಪಡೆಯಾಗಿ ಹಲವು ದಿನಗಳು ಕಳೆದರೂ ಮಂಡ್ಯದಲ್ಲಿ ಪ್ರಚಾರ ನಡೆಸಿಲ್ಲ. ಆದರೆ ಸುಮಲತಾ ಅಂಬರೀಶ್  ಅವರನ್ನ ಅಮ್ಮ ಅಮ್ಮ ಎಂದೇ ಕರೆಯುವ  ನಟ ದರ್ಶನ್ ಇದೀಘ   ಕಾಂಗ್ರೆಸ್ ಅಭ್ಯರ್ಥಿ  ಸ್ಟಾರ್ ಚಂದ್ರು ಪರ ಪ್ರಚಾರಕ್ಕಿಳಿದಿದ್ದಾರೆ.

ಇಂದು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಹಲಗೂರಿನಲ್ಲಿ ಪ್ರಚಾರ ಆರಂಭಿಸಿದ್ದು, ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರದಲ್ಲಿ ಭಾಗವಹಿಸಿದ್ದಾರೆ.

ಈ ವೇಳೆ ಮಾತನಾಡಿದ ಡಿ ಬಾಸ್ ದರ್ಶನ್, 'ನಾನು ಅಂದು ಕೂಡ ಇಂದು ಕೂಡ ವ್ಯಕ್ತಿಯನ್ನು ನೋಡಿ ಪ್ರಚಾರಕ್ಕೆ ಬಂದಿದ್ದೇನೆ. ಪಕ್ಷವನ್ನು ನೋಡಿ ಅಲ್ಲ' ಎಂದು ಹೇಳಿದ್ದಾರೆ . ಇನ್ನೂ ಇದೇ ವೇಳೆ,'ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರ ನಿಂತಾದ್ದಾರೆ ನಿಮ್ಮ ಅಮೂಲ್ಯವಾದ ಮತ ಅವರಿಗೆ ನೀಡಿ' ಎಂದು ಮನವಿ ಮಾಡಿದ್ದಾರೆ.

Key words: Actor, Darshan, campaign, Congress candidate

Tags :

.