ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ವಿಚಾರಣೆ ಮುಕ್ತಾಯ: ಹೇಳಿಕೆ ದಾಖಲು
06:15 PM Jun 19, 2024 IST
|
prashanth
ಬೆಂಗಳೂರು,ಜೂನ್,19,2024 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ವಿಚಾರಣೆಗೆ ಹಾಜರಾಗಿದ್ದು ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಪ್ರಕರಣ ಸಂಬಂಧ ಇಂದು ವಿಜಯಲಕ್ಷ್ಮಿ ಅವರು ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು. ಸತತ 5 ಗಂಟೆ 20 ನಿಮಿಷಗಳ ಕಾಲ ವಿಚಾರಣೆ ನಡೆದು ಮುಕ್ತಾಯವಾಗಿದ್ದು ವಿಚಾರಣೆ ಮುಗಿಸಿ ವಿಜಯಲಕ್ಷ್ಮಿ ಅವರು ವಾಪಸ್ ತೆರಳಿದ್ದಾರೆ.
ವಿಜಯಲಕ್ಷ್ಮಿ ಅವರಿಂದ ಕಾಮಾಕ್ಷೀಪಾಳ್ಯ ಠಾಣಾ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.
Key words: Actor, Darshan, wife, Vijayalakshmi, hearing