HomeBreaking NewsLatest NewsPoliticsSportsCrimeCinema

ವಯನಾಡ್ : 358 ಸಾವು, 206 ಮಂದಿ ನಾಪತ್ತೆ, ಬಾಧಿತ ಸ್ಥಳಕ್ಕೆ ನಟ ಮೋಹನ್ ಲಾಲ್ ಭೇಟಿ. ನೆರವಿನ ಅಭಯ.

04:07 PM Aug 03, 2024 IST | mahesh
courtesy: times now

 

Actor Mohanlal arrived in landslide-affected Wayanad wearing his army uniform on Saturday. He pledged ₹3 crore for the region's rehabilitation efforts.

 

ಕೇರಳ, ಆ.03,2024: (www.justkannada.in news) ವಯನಾಡ್ ಜಿಲ್ಲೆಯಲ್ಲಿ 358 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಭೂಕುಸಿತದಿಂದ ಬದುಕುಳಿದವರನ್ನು ಹುಡುಕಾಟ ಶನಿವಾರ ಸಂಜೆಯವರೆಗೂ ಮುಂದುವರೆದಿತ್ತು. ಒಟ್ಟು 1,300 ಕ್ಕೂ ಹೆಚ್ಚು ರಕ್ಷಕರು, ಭಾರೀ ಯಂತ್ರೋಪಕರಣಗಳು ಮತ್ತು ಸುಧಾರಿತ ಸಾಧನಗಳನ್ನು ಒಳಗೊಂಡ ಶೋಧ ಕಾರ್ಯಾಚರಣೆ  ಇಂದಿಗೆ ಐದನೆ ದಿನಕ್ಕೆ ಕಾಲಿಟ್ಟಿದೆ.

ಈ ಪ್ರಯತ್ನಗಳನ್ನು ಸೇನೆ, ಪೊಲೀಸ್ ಮತ್ತು ತುರ್ತು ಸೇವೆಗಳ ನೇತೃತ್ವದಲ್ಲಿ ನಡೆಸಲಾಗುತ್ತಿದೆ, ಸ್ಥಳೀಯ ಸ್ವಯಂ ಸೇವಕರು ಸಹ ಈ ಹುಡುಕಾಟದಲ್ಲಿ ಕೈ ಜೋಡಿಸಿದ್ದಾರೆ.  ಒಟ್ಟು 206 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕುಸಿತದಿಂದ ಮುಂಡಕ್ಕೈ ಮತ್ತು ಚೂರಲ್‌ಮಲಾ ಜನವಸತಿ ಪ್ರದೇಶಗಳಲ್ಲಿ ದೊಡ್ಡ ಬಂಡೆಗಳು ಮತ್ತು ಮರದ ದಿಮ್ಮಿಗಳಿಂದಾಗಿ ರಕ್ಷಣಾ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ. ಅಡೆತಡೆಗಳು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ಪತ್ತೆಹಚ್ಚಲು ಕಷ್ಟವಾಗುತ್ತಿದೆ ಎಂದು ಅಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ.

ಭಾರತೀಯ ಟೆರಿಟೋರಿಯಲ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿರುವ ನಟ ಮೋಹನ್ ಲಾಲ್ ಅವರು ಶನಿವಾರ ಸೇನಾ ಸಮವಸ್ತ್ರ ಧರಿಸಿ ಭೂಕುಸಿತ ಪೀಡಿತ ವಯನಾಡ್‌ಗೆ ಆಗಮಿಸಿದ್ದರು. ಪ್ರದೇಶದ ಪುನರ್ವಸತಿ ಪ್ರಯತ್ನಗಳಿಗೆ  ₹ 3 ಕೋಟಿ ರೂ. ನೆರವಿನ ವಾಗ್ದಾನ ಮಾಡಿದರು. ಮೆಪ್ಪಾಡಿಯ ಸೇನಾ ಶಿಬಿರಕ್ಕೆ ಭೇಟಿ ನೀಡಿದ ನಟ, ಅಧಿಕಾರಿಗಳೊಂದಿಗೆ ಕೆಲಕಾಲ ಚರ್ಚೆ ನಡೆಸಿ, ತಂಡದೊಂದಿಗೆ ವಿಪತ್ತು ವಲಯಕ್ಕೆ ತೆರಳಿದರು.

key words: Actor Mohanlal, arrived in, landslide-affected, Wayanad, wearing his army uniform, He pledged ₹3 crore, for the region's rehabilitation efforts

SUMMARY: 

courtesy: times now

Kerala: Search and rescue operations in landslide-affected areas of Wayanad are ongoing Right now, the focus is on the search operation to locate individuals trapped under the debris.

Tags :
Actor Mohanlalarrived infor the region's rehabilitation effortsHe pledged ₹3 crorelandslide-affectedWayanadwearing his army uniform
Next Article