For the best experience, open
https://m.justkannada.in
on your mobile browser.

ಕೃಷಿ ಇಲಾಖೆ ಬಗ್ಗೆ ನನಗೆ ಆಸಕ್ತಿ ಇದೆ: ಸಂಪುಟ ಸೇರ್ಪಡೆ ಬಗ್ಗೆ ಬಿಜೆಪಿ ತೀರ್ಮಾನ – ಹೆಚ್.ಡಿ ಕುಮಾರಸ್ವಾಮಿ

03:39 PM Jun 05, 2024 IST | prashanth
ಕೃಷಿ ಇಲಾಖೆ ಬಗ್ಗೆ ನನಗೆ ಆಸಕ್ತಿ ಇದೆ  ಸಂಪುಟ ಸೇರ್ಪಡೆ ಬಗ್ಗೆ ಬಿಜೆಪಿ ತೀರ್ಮಾನ – ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು, ಜೂನ್,5,2024 (www.justkannada.in): ಮಂಡ್ಯ ಕ್ಷೇತ್ರದಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಇಂದು ಎನ್ ಡಿಎ ಸಭೆಯಲ್ಲಿ ಪಾಲ್ಗೊಳ್ಳಲಿದ್ದು ಇದಕ್ಕೂ ಮುನ್ನ ತಮಗೆ ಕೃಷಿ ಖಾತೆ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ.

ಇಂದು ಮಾತನಾಡಿರುವ ವಿಜೇತ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ, ಕೃಷಿ ಇಲಾಖೆ ಬಗ್ಗೆ ನನಗೆ ಆಸಕ್ತಿ ಇದೆ.  ಮೊದಲಿನಿಂದಲೂ ಕೃಷಿ ಬಗ್ಗೆ ಆಸಕ್ತಿ ಇದೆ. ಮುಂದೆ ಏನು ತೀರ್ಮಾನ  ಆಗುತ್ತೆ ನೋಡೋಣ  ಸಂಪುಟ ಸೇರ್ಪಡೆ ಬಗ್ಗೆ ಬಿಜೆಪಿ ತೀರ್ಮಾನ ಮಾಡುತ್ತೆ ಎಂದು ತಿಳಿಸಿದರು.

ರಾಷ್ಟ್ರ ರಾಜಧಾನಿಯಲ್ಲಿ ಎನ್‌ಡಿಎ ಘಟಕಗಳ ಸಭೆ ನಡೆಯಲಿದ್ದು, ಜೆಡಿಎಸ್‌‍ ಪರವಾಗಿ ನಾನು ಭಾಗವಹಿಸುತ್ತಿದ್ದೇನೆ. ಕೇಂದ್ರದಲ್ಲಿ ಸರ್ಕಾರ ರಚಿಸುವ ಕಾಂಗ್ರೆಸ್‌ ‍ನ ಪ್ರಯತ್ನ ಫಲಿಸುವುದಿಲ್ಲ  ಎಂದು ಹೆಚ್ ಡಿಕೆ ಹೇಳಿದರು.

Key words: agriculture, cabinet, addition, HD Kumaraswamy

Tags :

.