For the best experience, open
https://m.justkannada.in
on your mobile browser.

AIISH  ಸಂಸ್ಥೆ ನಿರ್ದೇಶಕಿ ಡಾ.ಪುಷ್ಪಾವತಿ ಅವರಿಗೆ ಮತ್ತೊಂದು ಗರಿ.

12:50 PM Apr 22, 2024 IST | mahesh
aiish  ಸಂಸ್ಥೆ ನಿರ್ದೇಶಕಿ ಡಾ ಪುಷ್ಪಾವತಿ ಅವರಿಗೆ ಮತ್ತೊಂದು ಗರಿ
AIISH 𝐃𝐢𝐫𝐞𝐜𝐭𝐨𝐫  𝐃𝐫. 𝐌. 𝐏𝐮𝐬𝐡𝐩𝐚𝐯𝐚𝐭𝐡𝐢, Mysore

ಮೈಸೂರು, ಏ.22, 2024  : (www.justkannada.in news ) ನಗರದ ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆ  ನಿರ್ದೇಶಕಿ ಡಾ.ಎಂ.ಪುಷ್ಪಾವತಿ ಅವರು 2024-25ನೇ ಸಾಲಿಗೆ  “ ಸೀಳು ತುಟಿ ಮತ್ತು ಸೀಳು ಅಂಗುಳು  ಮತ್ತು ಸಂಬಂಧಿತ ಕ್ರೇನಿಯೋಫೇಷಿಯಲ್ ವೈಪರೀತ್ಯಗಳ ಭಾರತೀಯ ಸೊಸೈಟಿ” ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕಳೆದ ೨೨ ವರ್ಷಗಳಿಂದ ಅಸ್ಥಿತ್ವದಲ್ಲಿರುವ ಈ ಸಂಘ , ಸೀಳು ತುಟಿ  ಮತ್ತು ಸೀಳು ಅಂಗುಳು ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಇದೀಗ ಈ ಸಂಘದ ಉಪದಾಧ್ಯಕ್ಷರಾಗಿ ಮೈಸೂರು ಐಶ್‌ ನ ನಿರ್ದೇಶಕಿ  ಹಾಗೂ ವಾಕ್‌ ಭಾಷಾ ತಜ್ಞರಾದ ಡಾ. ಪುಷ್ಪಾವತಿ ಆಯ್ಕೆಗೊಂಡಿದ್ದಾರೆ.

ಕಳೆದ ೨೨ ವರ್ಷಗಳ ಬಳಿಕ “ 𝐈𝐧𝐝𝐢𝐚𝐧 𝐬𝐨𝐜𝐢𝐞𝐭𝐲 𝐨𝐟 𝐜𝐥𝐞𝐟𝐭 𝐥𝐢𝐩 𝐩𝐚𝐥𝐚𝐭𝐞 𝐚𝐧𝐝 𝐫𝐞𝐥𝐚𝐭𝐞𝐝 𝐜𝐫𝐚𝐧𝐢𝐨𝐟𝐚𝐜𝐢𝐚𝐥 𝐚𝐧𝐨𝐦𝐚𝐥𝐢𝐞𝐬 “ ಸಂಘದ ಉಪಾಧ್ಯಕ್ಷರಾಗಿ ವಾಕ್‌ ಭಾಷಾ ತಜ್ಞರು ನೇಮಕಗೊಂಡಿರುವುದು ಇದು ೨ ನೇ ಸಲ.

ಪ್ರತಿ ವರ್ಷ ಈ ಸಂಘಕ್ಕೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗುತ್ತದೆ. ಉಪಾಧ್ಯಕ್ಷರಾಗಿ ಆಯ್ಕೆಗೊಂಡವರೇ ಮುಂದಿನ ವರ್ಷ ಅಧ್ಯಕ್ಷರಾಗಿ ನೇಮಕಗೊಳ್ಳುವರು. ಈ ಹಿನ್ನೆಲೆಯಲ್ಲಿ ೨೦೨೫-೨೬ ನೇ ಸಾಲಿಗೆ ಡಾ.ಪುಷ್ಪಾವತಿ ಅವರೇ ಅಧ್ಯಕ್ಷರಾಗಿ ನೇಮಕಗೊಳ್ಳಲಿದ್ದಾರೆ ಎಂಬುದು ವಿಶೇಷ.

AIISH  ಹಿನ್ನೆಲೆ :

ರಾಜ್ಯದ ಮೈಸೂರು ನಗರದಲ್ಲಿ ನೆಲೆಗೊಂಡಿರುವ ವಾಕ್ ಮತ್ತು ಶ್ರವಣ ದೋಷಗಳ ಅಖಿಲ ಭಾರತ ಮಟ್ಟದ ಚಿಕಿತ್ಸಾ ಕೇಂದ್ರ (ಆಯಿಶ್). ಮಾತಿನ ತೊಂದರೆ, ಕಿವುಡತನ ಇತ್ಯಾದಿ ನ್ಯೂನತೆಗಳನ್ನು ಸರಿಪಡಿಸುವುದು ಹಾಗೂ ಆ ಬಗ್ಗೆ ಶಿಕ್ಷಣ ನೀಡುವುದು, ಸಂಶೋಧನೆ ನಡೆಸುವುದು ಈ ಸಂಸ್ಥೆಯ ಮುಖ್ಯ ಕಾರ್ಯ.

ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಈ ಸಂಸ್ಥೆ 1966ರ ಅಕ್ಟೋಬರ್ ತಿಂಗಳಿನಲ್ಲಿ ಒಂದು ಸ್ವಾಯತ್ತ ಸಂಸ್ಥೆಯಾಗಿ ರೂಪುಗೊಂಡಿತು. ಮೊದಲಿಗೆ ಮೈಸೂರು ನಗರದ ಝಾನ್ಸಿಲಕ್ಷೀಬಾಯಿ ರಸ್ತೆಯಲ್ಲಿರುವ ರಾಮಮಂದಿರ ಹಾಗೂ ಅನಂತರ ಮಹಾರಾಜಕಾಲೇಜು ಶತಮಾನೋತ್ಸವ ಭವನದಲ್ಲಿ ಕೆಲಸ ಮಾಡುತ್ತಿದ್ದ ಈ ಸಂಸ್ಥೆ 1970ರಲ್ಲಿ ಮಾನಸಗಂಗೋತ್ರಿ ಆವರಣಕ್ಕೆ ವರ್ಗಾವಣೆಗೊಂಡಿತು.

ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಅಂದಿನ ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರು ಈ ಸಂಸ್ಥೆಗೆ ನೀಡಿದ್ದ 32 ಎಕರೆ ಜಮೀನಿಗೆ ಬದಲಾಗಿ ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿಯಲ್ಲಿ 32 ಎಕರೆ ಜಮೀನು ನೀಡಿದ್ದರ ಫಲವಾಗಿ ಈ ಸಂಸ್ಥೆ ಇಲ್ಲಿ ರೂಪುಗೊಂಡಿತು.

ವಾಕ್-ಶ್ರವಣ ದೋಷಗಳ ತಪಾಸಣೆ ಚಿಕಿತ್ಸೆಗಳ ಜೊತೆಗೆ ಈ ಸಂಸ್ಥೆ ಅಧ್ಯಯನ ಹಾಗೂ ಸಂಶೋಧನೆಗೆ ಸಹ ಹೆಚ್ಚಿನ ಒತ್ತು ನೀಡುತ್ತಿದೆ.

ಈ ಸಂಸ್ಥೆ ನಿರ್ದೇಶಕಿಯಾಗಿ ವಾಕ್-‌ ಭಾಷ ತಜ್ಞೆ, ಮೈಸೂರಿನವರೇ ಆದ  ಡಾ.ಪುಷ್ಪಾವತಿ ಅವರು ಕಾರ್ಯ ನಿರ್ವಹಿಸುತ್ತಿದ್ದು ಸಂಸ್ಥೆಯ ಚಟುವಟಿಕೆಗಳನ್ನು ಮುನ್ನಡೆಸುತ್ತಿದ್ದಾರೆ.

Key words : AIISH , 𝐃𝐢𝐫𝐞𝐜𝐭𝐨𝐫,  𝐃𝐫 𝐌 𝐏𝐮𝐬𝐡𝐩𝐚𝐯𝐚𝐭𝐡𝐢, 𝐭𝐡𝐞 𝐕𝐢𝐜𝐞 𝐏𝐫𝐞𝐬𝐢𝐝𝐞𝐧𝐭, 𝐈𝐧𝐝𝐢𝐚𝐧 𝐬𝐨𝐜𝐢𝐞𝐭𝐲 𝐨𝐟 𝐜𝐥𝐞𝐟𝐭 𝐥𝐢𝐩 𝐩𝐚𝐥𝐚𝐭𝐞 𝐚𝐧𝐝 𝐫𝐞𝐥𝐚𝐭𝐞𝐝 𝐜𝐫𝐚𝐧𝐢𝐨𝐟𝐚𝐜𝐢𝐚𝐥 𝐚𝐧𝐨𝐦𝐚𝐥𝐢𝐞𝐬,  𝐟𝐨𝐫 𝐭𝐡𝐞 𝐲𝐞𝐚𝐫 𝟐𝟎𝟐𝟒-𝟐𝟓.

SUMMARY :

AIISH 𝐃𝐢𝐫𝐞𝐜𝐭𝐨𝐫  𝐃𝐫. 𝐌. 𝐏𝐮𝐬𝐡𝐩𝐚𝐯𝐚𝐭𝐡𝐢, Mysore

Dr. M. Pushpavathi, Director, All India Institute of Speech and Hearing , has been elected as the Vice-President of the "Indian Society of Cleft Lip Tongue and Related Craniofacial Abnormalities" for the year 2024-25.

The organisation, which has been in existence for the last 22 years, has been working towards creating awareness about issues related to cleft lip tongue. Dr. M. Pushpavathi, Director and Speech Language Expert, AISH, Mysuru, has been appointed as the Vice-President of the Institute.

This is the second time in 22 years that a speech language expert has been appointed as the vice-president of "Indian Society of cleft lip palate and related craniofacial anomalies".

Tags :

.