HomeBreaking NewsLatest NewsPoliticsSportsCrimeCinema

ಅಂತರಾಷ್ಟ್ರೀಯ ತೊದಲುವಿಕೆ ಜಾಗೃತಿ ದಿನ: ನ.3 ರಂದು ಮೈಸೂರಿನ ಐಶ್(AIISH)ನಲ್ಲಿ ಕಾರ್ಯಗಾರ.

05:10 PM Nov 01, 2023 IST | prashanth

ಮೈಸೂರು,ನವೆಂಬರ್,1,2023(www.justkannada.in): ಅಂತರಾಷ್ಟ್ರೀಯ ತೊದಲುವಿಕೆ ಜಾಗೃತಿ ದಿನದ ಸ್ಮರಣಾರ್ಥವಾಗಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಕ್ಲಿನಿಕಲ್ ಸೇವೆಗಳ ವಿಭಾಗದ  ಫ್ಲೂಯೆನ್ಸಿ ಘಟಕದ ವತಿಯಿಂದ  ಇದೇ ನವೆಂಬರ್ 3 ರಂದು ಒಂದು ದಿನದ ಕಾರ್ಯಗಾರವನ್ನ ಹಮ್ಮಿಕೊಂಡಿದೆ.

ತೊದಲುವಿಕೆ ಹೊಂದಿರುವ ವ್ಯಕ್ತಿಗಳ ಆರಂಭಿಕ ಗುರುತಿಸುವಿಕೆ ಮತ್ತು ನಿರ್ವಹಣೆಯಲ್ಲಿ ಶಿಕ್ಷಕರ ಪಾತ್ರ  ಕುರಿತು ಅಂದು ಬೆಳಿಗ್ಗೆ 10.00 ರಿಂದ ಸಂಜೆ 5.30 ರವರೆಗೆ ಕಾರ್ಯಗಾರ ನಡೆಯಲಿದೆ.  ಎಚ್.ಡಿ.ಕೋಟೆ, ಹುಣಸೂರು, ಕೆ.ಆರ್. ನಗರ, ಮೈಸೂರು ಉತ್ತರ, ಮೈಸೂರು ಗ್ರಾಮಾಂತರ, ನಂಜನಗೂಡು, ಪಿರಿಯಾಪಟ್ಟಣ ಮತ್ತು ಟಿ.ನರಸೀಪುರ ಮತ್ತು ಮೈಸೂರು ದಕ್ಷಿಣ ಪ್ರದೇಶಗಳ ಶಿಕ್ಷಕರುಗಳಿಗೆ ಈ ಕಾರ್ಯಗಾರವನ್ನ ಹಮ್ಮಿಕೊಳ್ಳಲಾಗಿದೆ. ಶಾಲೆಗಳಲ್ಲಿ ತೊದಲುವಿಕೆ ತೊಂದರೆ ಇರುವ ಮಕ್ಕಳನ್ನು ಗುರುತಿಸುವ ಮತ್ತು ನಿರ್ವಹಣೆ ಬಗ್ಗೆ ಶಿಕ್ಷಕರಿಗೆ ಕಾರ್ಯಗಾರದಲ್ಲಿ ಮಾಹಿತಿ ನೀಡಲಾಗುತ್ತದೆ.

ಕಾರ್ಯಕ್ರಮಕ್ಕೆ  ಮುಖ್ಯ ಅತಿಥಿಗಳಾಗಿ ಮೈಸೂರು ಡಿಡಿಪಿಐ (ಆಡಳಿತ) ಎಚ್.ಕೆ.ಪಾಂಡು ಆಗಮಿಸಲಿದ್ದು,  ಐಶ್(AIISH)  ನಿರ್ದೇಶಕಿ ಡಾ.ಎಂ.ಪುಷ್ಪಾವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಹೆಚ್ಚಿನ ವಿವರಗಳಿಗೆ, ಡಾ. ಸಂಗೀತಾ ಎಂ, ಸಹಾಯಕ ಪ್ರಾಧ್ಯಾಪಕರು, ಕ್ಲಿನಿಕಲ್ ಸೇವೆಗಳ ವಿಭಾಗ, ಮತ್ತು ಸೀಮಾ ಎಂ,  ಆಡಿಯಾಲಜಿಸ್ಟ್/ಸ್ಪೀಚ್-ಲ್ಯಾಂಗ್ವೇಜ್ ಪ್ಯಾಥಾಲಜಿಸ್ಟ್  ಕ್ಲಿನಿಕಲ್ ಸೇವೆಗಳ ವಿಭಾಗ, AIISH, ಮೈಸೂರು-570 006, ದೂರವಾಣಿ: 0821-2502503, Ext; 2502/2518.

Key words: AIISH-mysore- Seminar -  International Stuttering Awareness Day 

Tags :
AIISH-mysore- Seminar -  International Stuttering Awareness Day
Next Article