For the best experience, open
https://m.justkannada.in
on your mobile browser.

ತಮ್ಮ ಕಾರ್ಯಕ್ಷೇತ್ರದಲ್ಲಿ ವ್ಯವಹರಿಸುವಾಗ ಹೆಚ್ಚು ಕನ್ನಡವನ್ನೇ ಬಳಸಿ- ನಿವೃತ್ತ ಡಿವೈಎಸ್ಪಿ ಜೆ.ಬಿ ರಂಗಸ್ವಾಮಿ ಕರೆ.

04:10 PM Dec 01, 2023 IST | prashanth
ತಮ್ಮ ಕಾರ್ಯಕ್ಷೇತ್ರದಲ್ಲಿ ವ್ಯವಹರಿಸುವಾಗ ಹೆಚ್ಚು ಕನ್ನಡವನ್ನೇ ಬಳಸಿ  ನಿವೃತ್ತ ಡಿವೈಎಸ್ಪಿ ಜೆ ಬಿ ರಂಗಸ್ವಾಮಿ ಕರೆ

ಮೈಸೂರು,ಡಿಸೆಂಬರ್,1,2023(www.justkannada.in): ತಮ್ಮ ಕಾರ್ಯಕ್ಷೇತ್ರದಲ್ಲಿ ವ್ಯವಹರಿಸುವಾಗ ಹೆಚ್ಚು ಕನ್ನಡವನ್ನೇ ಬಳಸಿಬೇಕು ಎಂದು  ನಿವೃತ್ತ ಡಿವೈಎಸ್ಪಿ ಜೆ.ಬಿ ರಂಗಸ್ವಾಮಿ ಕರೆ ನೀಡಿದರು.

ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ(AIISH) ವತಿಯಿಂದ ದಿನಾಂಕ ನವೆಂಬರ್ 30ರಂದು  ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಜೆ.ಬಿ ರಂಗಸ್ವಾಮಿ ನಿವೃತ್ತ ಡಿವೈಎಸ್ಪಿಇವರು ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.  ಈ ಸಮಾರಂಭವನ್ನ ಉದ್ಘಾಟಿಸಿ ಮಾತನಾಡುತ್ತಾ ಕರ್ನಾಟಕ ಈ ಹೆಸರಿನ ರಚನೆ ಬಗ್ಗೆ ಸಾಹಿತಗಳು  ಮೇದಾವಿಗಳು ಪಟ್ಟ ಶ್ರಮವನ್ನ ವಿವರಿಸಿದರು.

ಅಲ್ಲದೆ  ನೆರೆದಿದ್ದವರಿಗೆ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಚರ್ಚಿಸವಾಗ, ವ್ಯವಹರಿಸುವಾಗ  ಹೆಚ್ಚು ಕನ್ನಡ ಭಾಷೆಯಲ್ಲಿ ವ್ವಹರಿಸುವ ಮೂಲಕ ಕನ್ನಡ ಭಾಷೆಯನ್ನ ಪ್ರೋತ್ಸಹಿಸಬೇಕಾಗಿ ಕರೆ ನೀಡಿದರು. ಇದೇ ವೇಳೆ ರಾಜ್ ಕುಮಾರ್ ನೇತೃತ್ವದಲ್ಲಿ  ನಡೆದ ಗೋಕಾಕ್ ಚಳುವಳಿಯನ್ನ ಸ್ಮರಿಸಿದರು.

ಆಯಿಷ್(AIISH) ಪ್ರಭಾರ ನಿರ್ದೇಶಕರಾದ ಟಿ. ಮಂಜುಳಾ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಹೊರ ರಾಜ್ಯದ ವಿದ್ಯಾರ್ಥಿಗಳು ಹೆಚ್ಚಿದ್ದರೂ ಸಹ ಚಿಕಿತ್ಸೆಗೆ ಬರುವವರಿಗೆ ಕನ್ನಡದಲ್ಲೇ ವ್ಯವಹರಿಸಲಾಗುತ್ತದೆ. ಹೀಗಾಗಿ  ಕನ್ನಡದಲ್ಲೇ ವ್ಯವಹರಿಸುವುದರಿಂದ  ಹೊರಗಿನ ಬರುವ ವಿದ್ಯಾರ್ಥಿಗಳು ಸಹ ಕನ್ನಡವನ್ನ ಬಹುಬೇಗ ಕಲಿಯುತ್ತಾರೆ ಎಂದರು.

ಈ ಸಂದರ್ಭದಲ್ಲಿ ಕನ್ನಡ ರಸಪ್ರಶ್ನೆ, ಹಾಡುಗಾರಿಕೆ ಗ್ರೂಪ್  ಡ್ಯಾನ್ಸ್ ವಿವಿಧ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.  ಈ ಸಂದರ್ಭದಲ್ಲಿ ಡಾ.ಜಿ ಪ್ರಕಾಶ್  ಆಯಿಷ್ ಜಿಮ್ಕಾನದ ಉಪಾಧ್ಯಕ್ಷರು ಹಾಗೂ ಅಭೀಷೇ‍ಕ್ ಬಿ.ಪಿ ಉಪಸ್ಥಿತರಿದ್ದರು.

Key words: AIISH-Use more- Kannada - your -workplace - Retired DySP- JB Rangaswamy

Tags :

.