For the best experience, open
https://m.justkannada.in
on your mobile browser.

ಹೊಂದಾಣಿಕೆ ರಾಜಕಾರಣ: ಸಿಎಂ ಸಿದ್ದರಾಮಯ್ಯ ಮತ್ತು ಶಾಸಕ ಯತ್ನಾಳ್ ನಡುವೆ ವಾಕ್ಸಮರ.

11:37 AM Feb 20, 2024 IST | prashanth
ಹೊಂದಾಣಿಕೆ ರಾಜಕಾರಣ  ಸಿಎಂ ಸಿದ್ದರಾಮಯ್ಯ ಮತ್ತು ಶಾಸಕ ಯತ್ನಾಳ್ ನಡುವೆ ವಾಕ್ಸಮರ

ಬೆಂಗಳೂರು,ಫೆಬ್ರವರಿ,20,2024(www.justkannada.in):  ರಾಜ್ಯದಲ್ಲಿ ವಿಧಾನ ಮಂಡಲ ಬಜೆಟ್ ಅಧಿವೇಶನ ನಡೆಯುತ್ತಿದ್ದು ಇಂದು ವಿಧಾನಸಭೆ ಕಲಾಪದಲ್ಲಿ ಹೊಂದಾಣಿಕೆ ರಾಜಕಾರಣ ಕುರಿತು ಚರ್ಚೆಯಾಯಿತು.

ವಿಧಾನಸಭೆ ಕಲಾಪದಲ್ಲಿ ಹೊಂದಾಣಿಕೆ ರಾಜಕಾರಣ ಕುರಿತು  ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ವಾಕ್ಸಮರ ನಡೆಯಿತು.

ಈ ಸಮಯದಲ್ಲಿ ಮಾತನಾಡಿದ ಶಾಸಕ  ಬಸನಗೌಡ ಪಾಟೀಲ್ ಯತ್ನಾಳ್ , ಲೋಕಸಭೆ ಚುನಾವಣೆ ಆದ ಬಳಿಕ ನೀವು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೀರಾ ಇದಕ್ಕೆ ಗ್ಯಾರಂಟಿ ಕೊಡುತ್ತೀರಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರಶ್ನಿಸಿದರು.

ಇದಕ್ಕೆ ತಿರುಗೇಟು ಕೊಟ್ಟ  ಸಿಎಂ ಸಿದ್ದರಾಮಯ್ಯ ಬೊಮ್ಮಾಯಿವರನ್ನು ಸೋಲಿಸಲು  ಪ್ರಯತ್ನಿಸಲಿಲ್ವಾ? ಎಂದು ಟಾಂಗ್ ಕೊಟ್ಟರು.

Key words: Alignment politics- Talks- between -CM -Siddaramaiah - MLA -Yatnal.

Tags :

.