HomeBreaking NewsLatest NewsPoliticsSportsCrimeCinema

ಸಿಂಡಿಕೇಟ್ ಸದಸ್ಯರ ನೇಮಕದಲ್ಲಿ ಅನ್ಯಾಯ ಆರೋಪ: ಸಚಿವರ ಮುಂದೆಯೇ ಟೇಬಲ್ ಕುಟ್ಟಿ ಕಾರ್ಯಕರ್ತನ ಆಕ್ರೋಶ

01:16 PM Sep 14, 2024 IST | prashanth

ಬೆಂಗಳೂರು,ಸೆಪ್ಟಂಬರ್,14,2024 (www.justkannada.in):  ವಿವಿಗಳಿಗೆ ಸಿಂಡಿಕೇಟ್ ಸದಸ್ಯರ ನೇಮಕ ವಿಚಾರದಲ್ಲಿ ಅನ್ಯಾಯಾ ಮಾಡಲಾಗಿದೆ ಎಂದು ಆರೋಪಿಸಿ ಇಬ್ಬರು ಸಚಿವರ ಮುಂದೆಯೇ ಟೇಬಲ್ ಕುಟ್ಟಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಆಕ್ರೋಶ ಹೊರ ಹಾಕಿದ ಘಟನೆ ಕೆಪಿಸಿಸಿ ಕಚೇರಿಯಲ್ಲಿ ನಡೆದಿದೆ.

ಕೆಪಿಸಿಸಿ ಕಚೇರಿಯಲ್ಲಿ ಸಭೆ ವೇಳೆ ಹೈಡ್ರಾಮಾ ನಡೆದಿದ್ದು ಸಚಿವರಾದ ಮಧು ಬಂಗಾರಪ್ಪ, ಡಾ.ಎಂ.ಸಿ ಸುಧಾಕರ್ ಮುಂದೆಯೇ  ಸಮೀವುಲ್ಲಾ ಎಂಬ ಕಾಂಗ್ರೆಸ್ ಕಾರ್ಯಕರ್ತ ಟೇಬಲ್ ಕುಟ್ಟಿ ಕಿಡಿಕಾರಿದ್ದಾರೆ.

ನಾನು ಯಾವ ನೇಮಕಾತಿಯನ್ನ ನೇರವಾಗಿ ಮಾಡಿಲ್ಲ.  ಏನಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಉತ್ತರ ಕೊಡುತ್ತಾರೆ   ಎಂದು ಸಚಿವ ಎಂ.ಸಿ ಸುಧಾಕರ್ ತಿಳಿಸಿದ್ದಾರೆ. ಈ ವೇಳೆ ಸಚಿವರ ಮಾತಿಗೆ ಕೆಂಡಾಮಂಡಲರಾದ ಸಮೀವುಲ್ಲಾ, ಬಿಜೆಪಿ ಆರ್ ಎಸ್ ಎಸ್ ಸದಸ್ಯರಿಗೆ ಮಣೆ ಹಾಕಲಾಗಿದೆ. ಮೂರು ವರ್ಷದಿಂದ ನಾನು ಪಾರ್ಟಿಯಲ್ಲಿ ಇದ್ದೀನಿ. ವಿವಿ ಸಿಂಡಿಕೇಟ್ ಸದಸ್ಯರನ್ನ ಹೊಸದಾಗಿ ನೇಮಕ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಅಲ್ಲಿದ್ದ ಕಾರ್ಯಕರ್ತರು ಮುಖಂಡರು ಸಮೀವುಲ್ಲಾರನ್ನ ಸಮಾಧಾನಪಡಿಸಿದರು.

Key words: Allegation, syndicate, members, congress Worker, minister

Tags :
AllegationCongress workermembersministerSyndicate
Next Article