ಕಾನೂನು ವಿವಿಯಲ್ಲೇ ಇದೇನ್ 'LAW '; ಸರಕಾರಕ್ಕೆ ಪತ್ರ ಬರೆದ ರಿಜಿಸ್ಟ್ರಾರ್.!
ಬೆ೦ಗಳೂರು, ಮೇ.28, 2024: (www.justkannada.in news ) ರಾಜ್ಯ ಕಾನೂನು ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಪುಸ್ತಕಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಕುಲಸಚಿವರಾದ ಅನುರಾಧ ವಸ್ತ್ರದ್ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಪುಸ್ತಕಗಳ ಖರೀದಿಗೆ ಸಂಬಂಧಿಸಿದಂತೆ KTPP ಕಾಯ್ದೆ ನಿಯಮ ಪಾಲನೆಯಾಗಿಲ್ಲ ಮತ್ತು ದರಪಟ್ಟಿ ಸಹ ಪಡೆದಿಲ್ಲ ಎಂದಿರುವ ಕುಲಸಚಿವರು, ಪುಸ್ತಕಗಳ ಖರೀದಿ ಮತ್ತು ಸರಬರಾಜಿಗೆ ಸಂಬಂಧಿಸಿದಂತೆ ಯಾವುದೇ ಕಾರ್ಯಾದೇಶವನ್ನೂ ಹೊರಡಿಸಿಲ್ಲ. ಈ ವಿಷಯ ಕುಲಪತಿಗಳ ಗಮನಕ್ಕೆ ತಂದಿದ್ದರೂ ಸಹ ಯಾವುದೇ ಕ್ರಮವಾಗಿಲ್ಲ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಕುಲಸಚಿವರಾದ ಅನುರಾಧ ವಸ್ತ್ರದ್ ಅವರು ನೇರವಾಗಿ ಸರ್ಕಾರಕ್ಕೆ 2024ರ ಫೆ9ರಂದು ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ..?:
ಕುಲಪತಿಗಳ ಕಾರ್ಯಾಲಯದ ವಿಶೇಷಾಧಿಕಾರಿ ಐ ಬಿ ಬಿರಾದಾರ ಅವರ ಮೌಖಿಕ ಆದೇಶದ ಮೂಲಕವೇ ಗ್ರಂಥಾಲಯಕ್ಕೆ ಪುಸ್ತಕಗಳ ಖರೀದಿಯಾಗಿದೆ. ಈ ಸಂಬಂಧ ಕಡತವನ್ನು ವಿಶ್ವವಿದ್ಯಾಲಯದ ಗ್ರಂಥಾಲಯದ ಶಾಖೆಗೆ ವರ್ಗಾಯಿಸದೇ ತಮ್ಮ ಬಳಿಯೇ ಇಟ್ಟುಕೊಂಡಿದ್ದರು ಎಂದಿದ್ದಾರೆ.
ಜತೆಗೆ ಕುಲಪತಿ ಕಚೇರಿ ವಿಶೇಷಾಧಿಕಾರಿ, ಅಧಿಕಾರವ್ಯಾಪ್ತಿ ಮೀರಿ ಅಧಿಕಾರ ಚಲಾಯಿಸಿದ್ದಾರೆ. ಈ ನಿಯಮಬಾಹಿರ ಕ್ರಮದಿಂದ ವಿಶ್ವವಿದ್ಯಾಲಯಕ್ಕೆ ಆರ್ಥಿಕ ನಷ್ಟವುಂಟಾಗಿದೆ ಎಂದು ಕುಲಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಾಮಾನ್ಯವಾಗಿ, ಗ್ರಂಥಾಲಯದ ಪುಸ್ತಕಗಳಿಗೆ ಸರಾಸರಿ ಶೇ25ರಿಂದ 30ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಆದರೆ ಬಿರಾದಾರ ಅವರ ಮೌಖಿಕ ಸೂಚನೆ ಮೇರೆಗೆ ಕೇವಲ ಶೇ15ರಷ್ಟು ರಿಯಾಯಿತಿ ಪಡೆದುಕೊಂಡಿದೆ. ಈ ನಿಯಮಬಾಹಿರ ಕ್ರಮದಿಂದ ವಿಶ್ವವಿದ್ಯಾಲಯಕ್ಕೆ ಆರ್ಥಿಕ ನಷ್ಟವುಂಟಾಗಿದೆ ಎಂದೂ ಪತ್ರದಲ್ಲಿ ಪ್ರಸ್ಥಾಪಿಸಿದ್ದಾರೆ.
KEY WORDS: Allegations of, violation of law in law university, Registrar writes to govt
SUMMARY:
Registrar Anuradha Vastrad has written to the government alleging corruption in the purchase of books for the library of the state law university.
The registrar said that the provisions of the KTPP Act regarding the purchase of books were not followed and the price list was not even obtained, adding that no work order has been issued regarding the purchase and supply of books. Though the matter was brought to the notice of the vice-chancellor, no action was taken.