HomeBreaking NewsLatest NewsPoliticsSportsCrimeCinema

ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ ಆರೋಪ:  ಮುಖ್ಯಶಿಕ್ಷಕ ಸಸ್ಪೆಂಡ್.

05:55 PM Jan 11, 2024 IST | prashanth

ಯಾದಗಿರಿ,ಜನವರಿ,11,2024(www.justkannada.in): ಶಾಲೆಯ ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ಮುಖ್ಯಶಿಕ್ಷಕರೊಬ್ಬರನ್ನ ಅಮಾನತು ಮಾಡಲಾಗಿದೆ.

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಅನಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಹನುಮೇಗೌಡ ಅಮಾನತಾದವರು.

ಮುಖ್ಯಶಿಕ್ಷಕ ಹನುಮೇಗೌಡ  ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರ ಪೋಷಕರು, ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಆತಂಕಗೊಂಡು ಮೇಲಾಧಿಕಾರಿಗಳಿಗೆ ದೂರು ನೀಡಿದ್ದರು.

ಮಕ್ಕಳ ಪೋಷಕರ ದೂರಿನನ್ವಯ ಅಧಿಕಾರಿಗಳು, ಶಾಲೆಗೆ ಭೇಟಿ ನೀಡಿ ಮಕ್ಕಳಿಂದ ಮಾಹಿತಿ ಪಡೆದುಕೊಂಡಿದ್ದರು. ಇದೀಗ ಮಕ್ಕಳು ಹಾಗೂ ಪೋಷಕರ ಹೇಳಿಕೆಯ ಆಧಾರದ ಮೇಲೆ ಹನುಮೇಗೌಡನನ್ನು ಅಮಾನತು ಮಾಡಿ ಯಾದಗಿರಿ ಜಿಲ್ಲಾ ಪಂಚಾಯತ್ ಸಿಇಒ ಗರೀಮಾ ಪನ್ವಾರ್ ಆದೇಶಿಸಿದ್ದಾರೆ ಎನ್ನಲಾಗಿದೆ.

Key words: Alleged-misbehavior –with-girl students- Headmaster -suspended

Tags :
Alleged-misbehaviorgirl studentsheadmastersuspended..with
Next Article