HomeBreaking NewsLatest NewsPoliticsSportsCrimeCinema

ಕನ್ನಡಿಗ, ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ವಿಸಾ ನಿರಾಕರಿಸಿದ ಅಮೇರಿಕ

04:05 PM Aug 14, 2024 IST | prashanth

ಬೆಂಗಳೂರು,ಆಗಸ್ಟ್,14,2024 (www.justkannada.in):  ಅಯೋಧ್ಯೆಯ ರಾಮಲಲ್ಲಾ ಮೂರ್ತಿ ಕೆತ್ತನೆ ಮಾಡಿದ್ದ ಕನ್ನಡಿಗ,  ಶಿಲ್ಪಿ ಅರುಣ್ ಯೋಗಿ ರಾಜ್ ಅವರಿಗೆ ಅಮೇರಿಕಾ ವೀಸಾ ನಿರಾಕರಿಸಿದೆ.

ಶಿಲ್ಪಿ ಅರುಣ್ ಯೋಗಿರಾಜ್ ಅವರು, ಅಕ್ಕ ಸಮ್ಮೇಳನ ಸೇರಿ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಲು 20 ದಿನ ಅಮೆರಿಕ ಪ್ರವಾಸಕ್ಕೆ ಹೋಗಬೇಕಿತ್ತು,  ಅಮೆರಿಕಾಗೆ ಹೋಗಲು ವೀಸಾಗೆ ಅರ್ಜಿ ಸಲ್ಲಿಸಿದ್ದರು.

ಆದರೆ ಅಮೆರಿಕ ಅವರ ವೀಸಾ ನಿರಾಕರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡ ರಾಮಮಂದಿರದಲ್ಲಿನ ಬಾಲರಾಮನ ವಿಗ್ರಹವನ್ನು ಅರುಣ್ ಯೋಗಿರಾಜ್ ಅವರೇ ಕೆತ್ತನೆ ಮಾಡಿದ್ದರು.  ಅಯೋಧ್ಯೆಯ ರಾಮಲಲ್ಲಾ ಮೂರ್ತಿ ಕೆತ್ತಿನೆ ಮಾಡಿದ ಬಳಿಕ ಅರುಣ್ ಯೋಗಿರಾಜ್ ಬಳಿಕ ದೇಶ, ವಿದೇಶದಲ್ಲಿ ಪ್ರಖ್ಯಾತಿ ಪಡೆದಿದ್ದಾರೆ.

Key words: America, denied, visa, sculptor, Arun Yogiraj

Tags :
AmericaArun Yogirajdeniedsculptorvisa
Next Article