For the best experience, open
https://m.justkannada.in
on your mobile browser.

ತಿರುಪತಿ ಲಡ್ಡಿಗೆ ಪ್ರಾಣಿಗಳ ಕೊಬ್ಬು ಬಳಕೆ: ಜಗನ್ ಬಂಧನಕ್ಕೆ ಯತ್ನಾಳ್ ಒತ್ತಾಯ

04:07 PM Sep 21, 2024 IST | prashanth
ತಿರುಪತಿ ಲಡ್ಡಿಗೆ ಪ್ರಾಣಿಗಳ ಕೊಬ್ಬು ಬಳಕೆ  ಜಗನ್ ಬಂಧನಕ್ಕೆ ಯತ್ನಾಳ್ ಒತ್ತಾಯ

ವಿಜಯಪುರ, ಸೆಪ್ಟೆಂಬರ್​ 21,2024 (www.justkannada.in): ತಿರುಪತಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು, ಕಳಪೆ ಎಣ್ಣೆ  ಬಳಕೆ ಆರೋಪ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,  ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿ  ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಿರುಪತಿ ಲಡ್ಡುವಿನಲ್ಲಿ ಪ್ರಾಣಿಯ ಕೊಬ್ಬು ಬಳಸುತ್ತಿದ್ದಾರೆ ಎಂಬ ಹೇಳಿಕೆ ರಾಜಕೀಯ ಟೀಕೆ ಅಲ್ಲ. ಗುಜರಾತ್​ನಲ್ಲಿ ಪರೀಕ್ಷಿಸಲಾಗಿದ್ದು, ಕೊಬ್ಬು ಬಳಸಿರುವುದು ದೃಢಪಟ್ಟಿದೆ. ಸನಾತನ ಧರ್ಮ ನಿರ್ಮೂಲನೆಗೆ ವ್ಯವಸ್ಥಿತ ಸಂಚು ರೂಪಿಸಲಾಗಿದೆ. ತಿಮ್ಮಪ್ಪನ ಸನ್ನಿಧಿಯಲ್ಲಿ ಘಟನೆ ನಡೆದಿರೋದು ಆಘಾತ ತಂದಿದೆ. ತಪ್ಪು ಮಾಡಿರುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.

ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ಈ ಪ್ರಕರಣವನ್ನು ಇಲ್ಲಿಗೆ ಬಿಡಬಾರದು. ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕು. ತಿರುಪತಿ ದೇಗುಲದ ಆಡಳಿತ ಮಂಡಳಿ ಹಿಂದೂಗಳ ಕೈಯಲ್ಲಿರಬೇಕು. ಇಡೀ ತಿರುಪತಿ ದೇವಸ್ಥಾನ ಶುದ್ಧಿಗೊಳಿಸಬೇಕು. ಸನಾತನ ಹಿಂದೂ ಧರ್ಮದವರ ಭಾವನೆ ಜೊತೆ ಆಟವಾಡಿ ಮೋಸ ಮಾಡಿದ್ದಾರೆ. ಧಾರ್ಮಿಕ ದತ್ತಿ ಇಲಾಖೆಯಲ್ಲಿ ಹಿಂದೂಯೇತರ ನೌಕರರು ಇರಬಾರದು. ದೇವಸ್ಥಾನ ವ್ಯವಸ್ಥಾಪನ ಮಂಡಳಿಯಲ್ಲಿ ಕೇವಲ ಹಿಂದುಗಳು ಮಾತ್ರ ಇರಬೇಕು. ಹಿಂದೂಯೇತರರು ಇದ್ದರೆ ಅವರನ್ನು ತೆಗೆದು ಹಾಕಬೇಕೆಂದು ಯತ್ನಾಳ್ ಹೇಳಿದರು.

Key words: animal fat, Tirupati Laddu,  Yatnal, YS Jagan, arrest

Tags :

.