HomeBreaking NewsLatest NewsPoliticsSportsCrimeCinema

ಮೊರಾರ್ಜಿ ವಸತಿ ಶಾಲೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ಅಂಕಿತಾ ಬಸಪ್ಪ.

08:23 PM Jun 13, 2024 IST | mahesh

 

ಬೆಂಗಳೂರು, ಜೂ.13,2024: (www.justkannada.in news ) ಎಸ್‌.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 100 ಅಂಕ ಗಳಿಸಿ ರಾಜ್ಯಕ್ಕೇ ಮೊದಲ ಸ್ಥಾನ ಪಡೆದ ಬಾಗಲಕೋಟೆ ಜಿಲ್ಲೆ ಮೆಳ್ಳಿಗೇರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಂಕಿತಾ ಬಸಪ್ಪ ಕೊಣ್ಣೂರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಧನ್ಯವಾದ ಹೇಳಿದ್ದಾಳೆ.

ಪತ್ರದಲ್ಲಿ, ತನ್ನನ್ನು ಬೆಂಗಳೂರಿಗೆ ಆಹ್ವಾನಿಸಿ, ಸನ್ಮಾನ ಮಾಡಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾಳೆ.ಜೊತೆಗೆ ಮುಖ್ಯಮಂತ್ರಿಯವರೇ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಸ್ಥಾಪನೆಯ ರೂವಾರಿ ಎಂಬುದನ್ನು ತಿಳಿದು ಹರ್ಷ ವ್ಯಕ್ತಪಡಿಸಿದ್ದಾಳೆ. ಈ ಶಾಲೆಗಳಿಂದ ಅನೇಕ ಬಡ ಪ್ರತಿಭೆಗಳಿಗೆ ಶಿಕ್ಷಣ ದೊರಕಿ, ಬಾಳಿಗೆ ದಾರಿದೀಪವಾಗಿವೆ ಎಂದು ಬಣ್ಣಿಸಿದ್ದಾಳೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಅಂಕಿತಾಳನ್ನು ಬೆಂಗಳೂರಿಗೆ ಆಹ್ವಾನಿಸಿ, ಸನ್ಮಾನಿಸಿದ್ದಲ್ಲದೆ, ಮುಂದಿನ ಶಿಕ್ಷಣಕ್ಕೆ ಬೆಂಬಲ ನೀಡುವುದಾಗಿಯೂ ಘೋಷಿಸಿದ್ದನ್ನು ಸ್ಮರಿಸಬಹುದು. ಈ ಹಿನ್ನೆಲೆಯಲ್ಲಿ ಅಂಕಿತಾ ಮುಖ್ಯಮಂತ್ರಿಗಳಗೆ ತನ್ನ ಅಂತರಂಗವನ್ನು ವ್ಯಕ್ತಪಡಿಸಿ ಈ ಪತ್ರ ಬರೆದಿದ್ದಾಳೆ.

key words: Morarji Residential School, Ankita Basappa, writes to, Chief Minister, Siddaramaiah

 

SUMMARY:

S.S.L.C. In the examination. Ankita Basappa Konnur of Morarji Desai Residential School in Melligeri in Bagalkot district, who secured the first rank in the state with 100 marks, has written a letter to Chief Minister Siddaramaiah thanking him.

 

Tags :
Ankita Basappachief ministerMorarji Residential SchoolSiddaramaiahwrites to
Next Article