For the best experience, open
https://m.justkannada.in
on your mobile browser.

ಎಂಪಿ ಚುನಾವಣೆಗೆ ಇನ್ನೂ 5 ಗ್ಯಾರಂಟಿ ಘೋಷಿಸಿ- ಸರ್ಕಾರದ ವಿರುದ್ದ ಹೆಚ್.ಡಿಕೆ ವಾಗ್ದಾಳಿ.

02:57 PM Feb 15, 2024 IST | prashanth
ಎಂಪಿ ಚುನಾವಣೆಗೆ ಇನ್ನೂ 5 ಗ್ಯಾರಂಟಿ ಘೋಷಿಸಿ  ಸರ್ಕಾರದ ವಿರುದ್ದ ಹೆಚ್ ಡಿಕೆ ವಾಗ್ದಾಳಿ

ಬೆಂಗಳೂರು, ಫೆಬ್ರವರಿ,15,2024(www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ವಿಧಾನಸಭೆಯಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸಭೆಯಲ್ಲಿ ಇಂದು ಮಾತನಾಡಿದ ಹೆಚ್.ಡಿಕೆ, ಕೇಂದ್ರ ಸರ್ಕಾರದ  ಶಿಕ್ಷಣ ನೀತಿ ರದ್ದು ಮಾಡ್ತಿದ್ದೀರಿ. ಇತ್ತ ಅತಿಥಿ ಶಿಕ್ಷಕರು ಕೆಲಸ ಕಾಯಂ ಮಾಡಿ ಅಂತಾ ಬೇಡಿಕೆ ಇಟ್ಟಿದ್ದಾರೆ. 8 ತಿಂಗಳ ನಿಮ್ಮ ಸಾಧನೆ ಹೇಳಿದ್ರೆ ನಿಮಗೆ ಬೇಜಾರಾಗುತ್ತದೆ.

ಗ್ಯಾರಂಟಿ  ಯೋಜನೆ ಬಗ್ಗೆ ಮಾತನಾಡಿದರೇ ಕಠಿಣ ಆಗುತ್ತದೆ. ಎಂಪಿ ಚುನಾವಣೆಗೆ ಇನ್ನೂ 5 ಗ್ಯಾರಂಟಿ ಘೋಷಿಸಿ.  ರಾಜ್ಯದ ಖಜಾನೆ ಖಾಲಿ ಆಗಿದೆ ಅಂತಾ ನಾನು ಹೇಳಲ್ಲ.  ನಮ್ಮ ರಾಜ್ಯದ  ಸಂಪತ್ತಿ ಉತ್ತಮವಾಗಿದೆ ಎಂದರು.

Key words: Announce -5 more- guarantees –MP- election- HD kumaraswamy- against-government.

Tags :

.