ಎಂಪಿ ಚುನಾವಣೆಗೆ ಇನ್ನೂ 5 ಗ್ಯಾರಂಟಿ ಘೋಷಿಸಿ- ಸರ್ಕಾರದ ವಿರುದ್ದ ಹೆಚ್.ಡಿಕೆ ವಾಗ್ದಾಳಿ.
02:57 PM Feb 15, 2024 IST
|
prashanth
ಬೆಂಗಳೂರು, ಫೆಬ್ರವರಿ,15,2024(www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ವಿಧಾನಸಭೆಯಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಮಾತನಾಡಿದ ಹೆಚ್.ಡಿಕೆ, ಕೇಂದ್ರ ಸರ್ಕಾರದ ಶಿಕ್ಷಣ ನೀತಿ ರದ್ದು ಮಾಡ್ತಿದ್ದೀರಿ. ಇತ್ತ ಅತಿಥಿ ಶಿಕ್ಷಕರು ಕೆಲಸ ಕಾಯಂ ಮಾಡಿ ಅಂತಾ ಬೇಡಿಕೆ ಇಟ್ಟಿದ್ದಾರೆ. 8 ತಿಂಗಳ ನಿಮ್ಮ ಸಾಧನೆ ಹೇಳಿದ್ರೆ ನಿಮಗೆ ಬೇಜಾರಾಗುತ್ತದೆ.
ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡಿದರೇ ಕಠಿಣ ಆಗುತ್ತದೆ. ಎಂಪಿ ಚುನಾವಣೆಗೆ ಇನ್ನೂ 5 ಗ್ಯಾರಂಟಿ ಘೋಷಿಸಿ. ರಾಜ್ಯದ ಖಜಾನೆ ಖಾಲಿ ಆಗಿದೆ ಅಂತಾ ನಾನು ಹೇಳಲ್ಲ. ನಮ್ಮ ರಾಜ್ಯದ ಸಂಪತ್ತಿ ಉತ್ತಮವಾಗಿದೆ ಎಂದರು.
Key words: Announce -5 more- guarantees –MP- election- HD kumaraswamy- against-government.
Next Article