For the best experience, open
https://m.justkannada.in
on your mobile browser.

ಬೆಂಗಳೂರಿನಲ್ಲಿ ಮತ್ತೊಂದು ಏರ್ ಪೋರ್ಟ್ ಅಗತ್ಯವಿದೆ- ಸಚಿವ ಎಂ.ಬಿ ಪಾಟೀಲ್

05:50 PM Jun 21, 2024 IST | prashanth
ಬೆಂಗಳೂರಿನಲ್ಲಿ ಮತ್ತೊಂದು ಏರ್ ಪೋರ್ಟ್ ಅಗತ್ಯವಿದೆ  ಸಚಿವ ಎಂ ಬಿ ಪಾಟೀಲ್

ಬೆಂಗಳೂರು,ಜೂನ್,21,2024 (www.justkannada.in): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣದ ಅಗತ್ಯವಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಚಿವ ಎಂ.ಬಿ ಪಾಟೀಲ್,  ಕೆಂಪೇಗೌಡ ವಿಮಾನ ನಿಲ್ದಾಣ ಹಾಗೂ ನಮಗೂ ಒಪ್ಪಂದವಿದೆ. ಆ ಒಪ್ಪಂದದ ಪ್ರಕಾರ 2033ರವರೆಗೆ ಬೇರೊಂದು ವಿಮಾನ ನಿಲ್ದಾಣ ಮಾಡುವುದಕ್ಕೆ ಅವಕಾಶ ಇಲ್ಲ. 2033ಕ್ಕೆ‌ ಆ ಒಪ್ಪಂದ ಮುಗಿಯುತ್ತೆ. ಆಗ ನಾವು ಎರಡನೇ ಏರ್ಪೋರ್ಟ್ ಮಾಡಬೇಕಾಗುತ್ತೆ ಎಂದರು.

ಪ್ರಯಾಣಿಕರ ಲೋಡ್ ಬಗ್ಗೆ ನಿನ್ನೆ ನಡೆದ ಸಭೆಯಲ್ಲಿ ಪರಾಮರ್ಶೆ ಮಾಡಲಾಗಿದೆ. 2032ರ ಸುಮಾರಿಗೆ ಕೆಐಎನಲ್ಲಿ ಜನಸಂದಣಿ ಹೆಚ್ಚಾಗಲಿದೆ. ಹಾಗಾಗಿ ಮತ್ತೊಂದು ಏರ್ ಪೋರ್ಟ್ ನಮಗೆ ಬೇಕಾಗುತ್ತದೆ. ಮುಂಬೈ, ಗೋವಾ, ದೆಹಲಿಯಲ್ಲಿ ಹೊಸ ಏರ್ ಪೊರ್ಟ್ ಗಳಿವೆ. ಮುಂದಿನ ದಿನಗಳಲ್ಲಿ ಬೆಂಗಳೂರಿಗೆ 2ನೇ ಏರ್ ಪೋರ್ಟ್ ಅಗತ್ಯವಿದೆ. ಎಲ್ಲಿ, ಎಷ್ಟು ಎಕರೆ ಜಾಗದಲ್ಲಿ ನಿರ್ಮಾಣ ಮಾಡಬೇಕು ಎಂಬ ಬಗ್ಗೆ ನಿರ್ಧಾರ ಮಾಡಿಲ್ಲ. ಈ ಬಗ್ಗೆ ಚರ್ಚಿಸಿದ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

Key words: Another, airport, Bengaluru, Minister, MB Patil

Tags :

.