HomeBreaking NewsLatest NewsPoliticsSportsCrimeCinema

ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರಿಗೆ ಮತ್ತೊಂದು ದೂರು

05:17 PM Aug 23, 2024 IST | prashanth

ಬೆಂಗಳೂರು, ಆಗಸ್ಟ್​​ 23,2024 (www.justkannada.in):  ಮುಡಾ ಹಗರಣ ಸಂಬಂಧ  ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು ಇದೀಗ ಸಿಎಂ ಸಿದ್ದರಾಮಯ್ಯ ವಿರುದ್ದ ಮತ್ತೊಂದು ದೂರು ನೀಡಲಾಗಿದೆ.

ಹೌದು,  ಜಿಲ್ಲಾ​ ಮತ್ತು ತಾಲೂಕು ಪಂಚಾಯತ್​ನಲ್ಲಿ ಬಾಕಿ ಉಳಿದಿರುವ 1494 ಕೋಟಿ ರೂ. ಹಣ ದುರುಪಯೋಗದ ಬಗ್ಗೆ ಸಿಎಂ ಸಿದ್ದರಾಮಯ್ಯ ವಿರುದ್ದ ವಿಧಾನಪರಿಷತ್ ಬಿಜೆಪಿ ಸದಸ್ಯ ಅರುಣ್​ ರಾಜ್ಯಪಾಲರಿಗೆ  ದೂರು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

1494 ಕೋಟಿ ರೂ. ಹಣ ಎಲ್ಲಿದೆ, ರಾಜ್ಯ ಸರ್ಕಾರದ ಖಜಾನೆಯಲ್ಲೂ ಇಲ್ಲ. ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರೂ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ನೀಡಲಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಲು ಕೋರಿ ದೂರಿನಲ್ಲಿ ಅರುಣ್ ಮನವಿ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಎಂಎಲ್ ಸಿ ಅರುಣ್​, ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದೇನೆ. 2022-23ರ ಅವಧಿಯಲ್ಲಿ ನಮ್ಮ ಸರ್ಕಾರದ ಅಧಿಕಾರದಲ್ಲಿ ಇತ್ತು. ಜಿಲ್ಲಾ ಮತ್ತು ತಾಲೂಕು ಪಂಚಾಯತ್​ಗಳಲ್ಲಿ ಎಷ್ಟು ಹಣ ಬಳಕೆ ಆಗಿದೆ. ಉಳಿದ ಮೊತ್ತ ಯಾವುದಕ್ಕೆ ಉಪಯೋಗ ಮಾಡಲಾಗಿದೆ  ಎಂದು ಪ್ರಶ್ನೆ ಮಾಡಿದ್ದೇನೆ. 1953 ಕೋಟಿ ರೂ. ಹಣ ಇತ್ತು, ಸಂಚಿತ ನಿಧಿಗೆ ಉಳಿದ ಹಣ ಹೋಗಬೇಕು. ಹಣ ಬಳಕೆ ಮಾಡಬೇಕೆಂದ್ರೆ ಶಾಸಕರ ಒಪ್ಪಿಗೆಯನ್ನು ಪಡೆಯಬೇಕು ಎಂದು  ತಿಳಿಸಿದರು.

Key words: Another, complaint, Governor, against, CM Siddaramaiah

 

Tags :
againstAnotherCM SiddaramaiahcomplaintGovernor
Next Article