HomeBreaking NewsLatest NewsPoliticsSportsCrimeCinema

ಪ.ಬಂಗಾಳದಲ್ಲಿ ‘ಅತ್ಯಾಚಾರ ವಿರೋಧಿ ಮಸೂದೆ’ ಸರ್ವಾನುಮತದಿಂದ ಅಂಗೀಕಾರ

03:49 PM Sep 03, 2024 IST | prashanth

ಕೋಲ್ಕತ್ತಾ ಸೆಪ್ಟೆಂಬರ್ , 3,2024 (www.justkannada.in):  ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಇಂದು ಹೊಸದಾಗಿ ಮಂಡಿಸಿದ್ದ 'ಅತ್ಯಾಚಾರ ವಿರೋಧಿ ಮಸೂದೆ'ಯನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ.

ಇತ್ತೀಚೆಗೆ ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ-ಕೊಲೆ ಪ್ರಕರಣ ಭಾರಿ ಸದ್ದು ಮಾಡಿತ್ತು. ಈ ಬೆನ್ನಲ್ಲೆ ಟಿಎಂಸಿ ಸರ್ಕಾರ ಎರಡು ದಿನಗಳ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆದಿದ್ದು, ಇಂದು  'ಅತ್ಯಾಚಾರ ವಿರೋಧಿ ಮಸೂದೆಯನ್ನು ಮಂಡಿಸಲಾಯಿತು.

ಬಳಿಕ ಮಾತನಾಡಿದ ಸಿಎಂ ಮಮತಾ ಬ್ಯಾನರ್ಜಿ, ಮಸೂದೆಯನ್ನು "ಮಾದರಿ ಮತ್ತು ಐತಿಹಾಸಿಕ" ಎಂದು ಶ್ಲಾಘಿಸಿದರು. ಅಪರಾಜಿತಾ ಮಹಿಳೆ ಮತ್ತು ಮಕ್ಕಳ ಮಸೂದೆ (ಪಶ್ಚಿಮ ಬಂಗಾಳ ಕ್ರಿಮಿನಲ್ ಕಾನೂನುಗಳು ಮತ್ತು ತಿದ್ದುಪಡಿ) ಮಸೂದೆ 2024’ ಎಂಬ ಮಸೂದೆ ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದ ಹೊಸ ನಿಬಂಧನೆಗಳನ್ನು ಪರಿಷ್ಕರಿಸುವ ಮತ್ತು ಪರಿಚಯಿಸುವ ಮೂಲಕ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಎಂದರು.

ಅತ್ಯಾಚಾರವು ಮಾನವೀಯತೆಯ ವಿರುದ್ಧದ ಶಾಪ. ಅಂತಹ ಅಪರಾಧಗಳನ್ನು ತಡೆಯಲು ಅಗತ್ಯವಿರುವ ಸಾಮಾಜಿಕ ಸುಧಾರಣೆಗಳು ಬೇಕು. ಅಪರಾಜಿತಾ ಮಸೂದೆಗೆ ಸಹಿ ಹಾಕುವಂತೆ ಪ್ರತಿಪಕ್ಷಗಳು ರಾಜ್ಯಪಾಲ ಸಿವಿ ಆನಂದ ಬೋಸ್ ಅವರನ್ನು ಕೇಳಬೇಕು. ಅದರ ನಂತರ ಅದನ್ನು ಜಾರಿಗೊಳಿಸುವುದು ನಮ್ಮ ಜವಾಬ್ದಾರಿ ಎಂದು ಮಮತಾ ಬ್ಯಾನರ್ಜಿ ತಿಳಿಸಿದರು.

ಪ್ರತಿಪಕ್ಷಗಳು ಇದಕ್ಕೆ ಸಂಪೂರ್ಣ ಬೆಂಬಲ ನೀಡಿದ ನಂತರ ಪಶ್ಚಿಮ ಬಂಗಾಳ ವಿಧಾನಸಭೆಯು ಅತ್ಯಾಚಾರ-ವಿರೋಧಿ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿತು. ಕರಡು ಶಾಸನವು ಅತ್ಯಾಚಾರದ ಅಪರಾಧಿಗಳಿಗೆ ಮರಣದಂಡನೆಯನ್ನು ಬಯಸುತ್ತದೆ. ಕೃತ್ಯವು ಸಂತ್ರಸ್ತರ ಸಾವಿಗೆ ಕಾರಣವಾದರೆ ಅಥವಾ ಕೋಮಾದಂಥ ಸ್ಥಿತಿಗೆ ಕಾರಣವಾದರೆ ಇದೇ ಶಿಕ್ಷೆಯನ್ನು ಅಪರಾಧಿಗೆ ವಿಧಿಸಲಾಗುತ್ತದೆ.

Key words: Anti-Rape Bill,  passed, unanimously ,  West Bengal

Tags :
Anti-Rape BillpassedunanimouslyWest Bengal
Next Article