For the best experience, open
https://m.justkannada.in
on your mobile browser.

ಛಾಯಾಗ್ರಹಣ ಮತ್ತು ಕಿರು ವಿಡಿಯೋ ಸ್ಪರ್ಧೆಗಳಿಗೆ ಅರ್ಜಿ ಆಹ್ವಾನ.

05:51 PM May 15, 2024 IST | prashanth
ಛಾಯಾಗ್ರಹಣ ಮತ್ತು ಕಿರು ವಿಡಿಯೋ ಸ್ಪರ್ಧೆಗಳಿಗೆ ಅರ್ಜಿ ಆಹ್ವಾನ

ಮೈಸೂರು,ಮೇ,15, 2024 (www.justkannada.in): ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ವತಿಯಿಂದ “ಮೈಸೂರಿನ ಅನ್ವೇಷಿಸದ ಪ್ರವಾಸಿ ತಾಣಗಳು" ಎಂಬ ಶೀರ್ಷಿಕೆಯಡಿಯಲ್ಲಿ ರಾಜ್ಯ ಮಟ್ಟದ ಛಾಯಾಚಿತ್ರ ಮತ್ತು ಕಿರು ವಿಡಿಯೋ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ನದಿಗಳು, ಪ್ರಕೃತಿ ಮತ್ತು ರಮಣೀಯ ಸೌಂದರ್ಯ ತಾಣಗಳು, ಜಲಪಾತಗಳು, ವಸ್ತು ಸಂಗ್ರಹಾಲಯಗಳು, ಜಾನಪದ ಹಾಗೂ ಕಲೆಗಳು, ಸಾಂಪ್ರದಾಯಿಕ ಸ್ಥಳೀಯ ಹಬ್ಬಗಳು ಮತ್ತು ಕಲೆಗಳು, ಪಾರಂಪರಿಕ ಕಟ್ಟಡಗಳು ಮತ್ತು ಸ್ಮಾರಕಗಳು, ಧಾರ್ಮಿಕ ಮತ್ತು ಸಾಹಸ ಪ್ರವಾಸೋದ್ಯಮ ಹಾಗೂ ಇತರೆ ತಾಣಗಳ ರಾಜ್ಯ ಮಟ್ಟದ ಛಾಯಾಗ್ರಹಣ ಮತ್ತು ಕಿರು ವೀಡಿಯೋ ಸ್ಪರ್ಧೆಯಾಗಿದೆ. ಆಯ್ಕೆಯಾದ ಅತ್ಯುತ್ತಮ ಸಲ್ಲಿಕೆಗಳಿಗೆ ಪ್ರಥಮ ಬಹುಮಾನವಾಗಿ ರೂ.25,000 ದ್ವಿತೀಯ ಬಹುಮಾನ ರೂ.15,000 ಹಾಗೂ ತೃತೀಯ ಬಹುಮಾನವಾಗಿ ರೂ.10,000 ಗಳನ್ನು ನೀಡಲಾಗುವುದು.

ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು https://Mysore.nic.inen/competitions/ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಜೂ.20 ಅಂತಿಮ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ visitmysurutourism@gmail.com  ಹಾಗೂ 7411564510, 9008693409 ನ್ನು ಸಂಪರ್ಕಿಸಬಹುದು ಎಂದು ಮೈಸೂರು ವಿಭಾಗದ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಎಂ.ಕೆ. ಸವಿತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: applications – photography-short video-competitions

Tags :

.