HomeBreaking NewsLatest NewsPoliticsSportsCrimeCinema

ನಿಗಮ ಮಂಡಳಿ ಅಧ್ಯಕ್ಷರ ನೇಮಕ ವಿಚಾರ: ಡಾ.ಜಿ.ಪರಮೇಶ್ವರ್ ಅಸಮಾಧಾನ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ಏನು..?

03:47 PM Nov 28, 2023 IST | prashanth

ಬೆಂಗಳೂರು,ನವೆಂಬರ್,28,2023(www.justkannada.in):  ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಸಿಎಂ,ಡಿಸಿಎಂ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ. ನಮ್ಮಗಳ ಅಭಿಪ್ರಾಯ ಕೇಳಿಲ್ಲ ಎಂಬ  ಗೃಹ ಸಚಿವ ಪರಮೇಶ್ವರ್ ಅಸಮಾಧಾನದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇನ್ನೂ ಪ್ರಿಲಿಮನರಿ ಸ್ಟೇಜ್ ನಲ್ಲಿದೆ. ಇನ್ನು ಯಾವ ಲಿಸ್ಟ್ ಫೈನಲ್ ಆಗಿಲ್ಲ. ಇನ್ನೂ ಯಾರ ಅಭಿಪ್ರಾಯವನ್ನೂ ಕೇಳಿಲ್ಲ.  ಪರಮೇಶ್ವರ್ ಒಬ್ಬರಲ್ಲ ಬೇರೆ ಯಾರ ಅಭಿಪ್ರಾಯವನ್ನೂ ಕೇಳಿಲ್ಲ. ಹಾಗಾಗಿ ಅದರ ಬಗ್ಗೆ ನಾನು ಮಾತಾಡಲ್ಲ ಎಂದರು.

ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದ ಸಿಬಿಐ ಪ್ರಕರಣ ವಾಪಸ್ ಪಡೆದ ಸರ್ಕಾರದ ನಿರ್ಧಾರ ಪ್ರಶ್ನಿಸಿ  ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕೋರ್ಟ್ ಗೆ ಮೊರೆ ಹೋದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಯತ್ನಾಳ್ ಕೋರ್ಟ್ ಗೆ ಹೋಗಲಿ ಯಾರು ಬೇಡ ಅಂದರು. ಏನೇ ಇದ್ದರೂ ಕೋರ್ಟ್ ನಲ್ಲಿ ತೀರ್ಮಾನ ಆಗುತ್ತೆ. ಕೋರ್ಟ್ ಗೆ ಹೋಗಲು ಪ್ರಶ್ನೆ ಮಾಡಲು ಎಲ್ಲರಿಗೂ ಅಧಿಕಾರ ಇದೆ ಹೋಗಲಿ ಎಂದು ತಿಳಿಸಿದರು.

Key words: Appointment -Corporation Board- Chairman-CM Siddaramaiah

Tags :
Appointment -Corporation Board- Chairman-CM Siddaramaiah
Next Article