HomeBreaking NewsLatest NewsPoliticsSportsCrimeCinema

ಅರಸು ಪ್ರತಿಮೆ ನಿರ್ಮಾಣ ;  ನಾನು ಭಾಗಿಯಾಗಿಲ್ಲ, ಅರುಣ್‌ ಯೋಗಿರಾಜ್ ಸ್ಪಷ್ಟನೆ.

01:16 PM May 21, 2024 IST | mahesh

 

ಮೈಸೂರು, ಮೇ.21, 2024: (www.justkannada.in news ) ನೂತನ ಜಿಲ್ಲಾಧಿಕಾರಿ ಕಚೇರಿ ಮುಂದೆ ಸ್ಥಾಪಿಸಲು ಉದ್ದೇಶಿಸಿರುವ ಮಾಜಿ ಸಿಎಂ, ದಿವಂಗತ ದೇವರಾಜ ಅರಸು ಪ್ರತಿಮೆ ನಿರ್ಮಾಣ ಕಾರ್ಯದಲ್ಲಿ ನಾನು ಭಾಗಿಯಾಗಿಲ್ಲ. ಅನಗತ್ಯವಾಗಿ ನನ್ನ ಹೆಸರು ಬಳಕೆ ಸರಿಯಲ್ಲ ಸ್ಪಷ್ಟನೆ ನೀಡಿದ ಖ್ಯಾತ ಶಿಲ್ಪಿ ಅರುಣ್‌ ಯೋಗಿರಾಜ್.‌

ಈ ಸಂಬಂಧ ಜಸ್ಟ್‌ ಕನ್ನಡ  ಜತೆ ಮಾತನಾಡಿದ ಅರುಣ್‌ ಯೋಗಿರಾಜ್‌ ಅವರು ಹೇಳಿದಿಷ್ಟು..

ನಾನು ಮೂಲತಃ ಮೈಸೂರಿನವನು. ಜಗತ್ತಿಗೆ ನನ್ನ ಪರಿಚಯವಾಗಲು ಮೈಸೂರೇ ಮೂಲ. ಆದ್ದರಿಂದ ಮೈಸೂರಿನ ಯಾವುದೇ ಕೆಲಸವಾದರು ಶ್ರದ್ಧೆಯಿಂದ ಮಾಡಿಯೇ ತೀರುತ್ತೇನೆ. ಆದರೆ, ಮೈಸೂರಿನ ನೂತನ ಜಿಲ್ಲಾಧಿಕಾರಿ ಕಚೇರಿ ಬಳಿ ನಿರ್ಮಿಸಲು ಉದ್ದೇಶಿಸಿರುವ ಮಾಜಿ ಸಿಎಂ ದೇವರಾಜ ಅರಸು ಪ್ರತಿಮೆ ನಿರ್ಮಾಣ ಕಾರ್ಯದಲ್ಲಿ ನನ್ನ ಪಾತ್ರವಿಲ್ಲದಿದ್ದರೂ ಅನಗತ್ಯವಾಗಿ ನನ್ನ ಹೆಸರು ಬಳಸಲಾಗುತ್ತಿದೆ. ಆದ್ದರಿಂದ ಈ ಮೂಲಕ ಸ್ಪಷ್ಟನೆ ನೀಡುತ್ತಿರುವೆ. ಅರಸು ಪ್ರತಿಮೆ ನಿರ್ಮಾಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ.

ಪ್ರತಿಮೆ ನಿರ್ಮಾಣಕ್ಕೆ ಉತ್ಸುಕನಾಗಿರುವುದಾಗಿ ಆಸಕ್ತಿ ವ್ಯಕ್ತಪಡಿಸಿದ್ದೆ. ಆದರೆ ಸಂಬಂಧಪಟ್ಟವರು ಪ್ರತಿಮೆ ನಿರ್ಮಾಣಕ್ಕೆ ನನ್ನನ್ನು ಪರಿಗಣಿಸಲಿಲ್ಲ. ಇದರಿಂದ ನನಗೇನು ಬೇಜಾರಿಲ್ಲ. ಯಾರಿಗೆ ಈ ಕೆಲಸ ದೊರೆತಿದೆಯೋ ಅವರೇ ಶಿಲ್ಪವನ್ನು ಕೆತ್ತಲಿ ಅವರಿಗೆ ಆಲ್‌ ದಿ ಬೆಸ್ಟ್.‌ ಆದರೆ, ಈ ಕೆಲಸದಲ್ಲಿ ನನ್ನ ಹೆಸರು ಬಳಕೆ ಸರಿಯಲ್ಲ ಎಂದರು.

key words: construction of the Devaraj Arasu statue; I am not involved, clarifies Arun Yogiraj.

summary: 

 

"I am not involved in the construction of the statue of former CM and late Devaraj Urs, which is proposed to be installed in front of the new Deputy Commissioner's office in Mysuru. It is not right to use my name unnecessarily.  Famous sculptor Arun Yogiraj clarifies to Just Kannada.

Tags :
clarifies Arun Yogiraj.construction of the Devaraj Arasu statue; I am not involved
Next Article