HomeBreaking NewsLatest NewsPoliticsSportsCrimeCinema

ತಮಿಳುನಾಡು : ಸಾರಾಯಿ ಸೇವಿಸಿ 34 ಮಂದಿ ಮೃತಪಟ್ಟ ಘಟನೆ ವರದಿ.

08:16 PM Jun 20, 2024 IST | mahesh

 

ಚೆನ್ನೈ, ಜೂ.20,2024: (www.justkannada.in news) ಮಿಥೆನಾಲ್ ಮಿಶ್ರಿತ ಅರಕ್ ಸೇವಿಸಿ ಮೂವತ್ನಾಲ್ಕು ಮಂದಿ ಸಾವನ್ನಪ್ಪಿದ ಘಟನೆ ನಡೆದಿದೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಗುರುವಾರ ಈ ದುರಂತ ಘಟನೆಯನ್ನು ಖಚಿತ ಪಡಿಸಿದ್ದಾರೆ.

ಕಲ್ಲಾಕುರಿಚಿ ಕಳ್ಳಭಟ್ಟಿ ದುರಂತದ ಕುರಿತು ಮಾತನಾಡಿದ ಸ್ಟಾಲಿನ್, ಭವಿಷ್ಯದ ದುರಂತಗಳನ್ನು ತಡೆಗಟ್ಟಲು ಮತ್ತು ಸಾವುಗಳ ತನಿಖೆಗೆ ವಿಧಾನಗಳನ್ನು ಶಿಫಾರಸು ಮಾಡಲು ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಬಿ ಗೋಕುಲದಾಸ್ ನೇತೃತ್ವದಲ್ಲಿ ಏಕವ್ಯಕ್ತಿ ಆಯೋಗವನ್ನು ರಚಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವರದಿಯ ಪ್ರಕಾರ, ಕಲ್ಲಾಕುರಿಚಿ ದುರಂತಕ್ಕೆ ಕಾರಣವಾದ ವಿಷಕಾರಿ ಅರಕ್ ದಂಧೆಗೆ ಸಂಬಂಧಿಸಿದ ನಾಲ್ವರನ್ನು ಬಂಧಿಸಲಾಗಿದೆ.

ಇದೇ ವೇಳೆ ಸಿಎಂ ಸ್ಟಾಲಿನ್ ಅವರು ಕಲ್ಲಾಕುರಿಚಿ ಹೂಚ್ ದುರಂತದಲ್ಲಿ ಗಾಯಗೊಂಡವರಿಗೆ ತಲಾ 10 ಲಕ್ಷ ರೂ., ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ 50 ಸಾವಿರ ರೂ. ಪರಿಹಾರದ ನೆರವು ಘೋಷಿಸಿದ್ದಾರೆ.

ಕಲ್ಲಕುರಿಚಿ ಹೂಚ್ ದುರಂತದ ತನಿಖೆಯ ನಂತರ ರಾಜ್ಯ ಗೃಹ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರು ಘಟನೆಯ ಬಗ್ಗೆ ವರದಿಯನ್ನು ಸಲ್ಲಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸೂಚಿಸಿದರು.

ಏತನ್ಮಧ್ಯೆ, ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಸೇಲಂ ರೇಂಜ್, ಇಎಸ್ ಉಮಾ ಮಾಧ್ಯಮಗಳ ಜತೆ ಮಾತನಾಡಿ, "ಕಲ್ಲಾಕುರಿಚಿಯಲ್ಲಿ ನಾವು ಏಳು ಎಸ್‌ಪಿಗಳನ್ನು ನಿಯೋಜಿಸಲಾಗಿದೆ. ಈ ಅಧಿಕಾರಿಗಳ ಜತೆಗೆ ಕನಿಷ್ಠ 1,000 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.

key words: toxic arrack tragedy, at Kallakurichi, thirty-four persons died,Tamil Nadu Chief Minister MK Stalin said.

Tags :
at KallakurichiTamil Nadu Chief Minister MK Stalin said.thirty-four persons diedtoxic arrack tragedy
Next Article