For the best experience, open
https://m.justkannada.in
on your mobile browser.

ಕರವೇ ಕಾರ್ಯಕರ್ತರ ಬಂಧನ: ಕಾನೂನು ಉಲ್ಲಂಘಿಸಿದ್ರೆ ಸುಮ್ಮನಿರಲು ಆಗಲ್ಲ- ಗೃಹ ಸಚಿವ ಡಾ.ಜಿ.ಪರಮೇಶ್ವರ್.

12:59 PM Dec 28, 2023 IST | prashanth
ಕರವೇ ಕಾರ್ಯಕರ್ತರ ಬಂಧನ  ಕಾನೂನು ಉಲ್ಲಂಘಿಸಿದ್ರೆ ಸುಮ್ಮನಿರಲು ಆಗಲ್ಲ  ಗೃಹ ಸಚಿವ ಡಾ ಜಿ ಪರಮೇಶ್ವರ್

ಬೆಂಗಳೂರು, ಡಿಸೆಂಬರ್, 28,2023(www.justkannada.in):  ಕಡ್ಡಾಯವಾಗಿ ಕನ್ನಡ ನಾಮಫಲಕ ಅಳವಡಿಸಬೇಕೆಂದು ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ  ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನ ಬಂಧಿಸಲಾಗಿದೆ.  ಪ್ರತಿಭಟನೆ ವೇಳೆ ಕಲ್ಲು ತೂರಾಟ ನಡೆದ ಹಿನ್ನೆಲೆ  29 ಕರವೇ ಕಾರ್ಯಕರ್ತರನ್ನ ಬಂಧಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಈ ಕುರಿತು ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ಕಾನೂನಿನ ಉಲ್ಲಂಘನೆ ಮಾಡಿದ್ರೆ ಸುಮ್ಮನಿರಲು ಆಗಲ್ಲ. ನಮ್ಮ ಸರ್ಕಾರ ಕನ್ನಡದ ಪರವಾಗಿ, ಯೋಜನೆಗಳನ್ನ, ತೀರ್ಮಾನಗಳ ಬಗ್ಗೆ ನಿಂತಿದೆ.

ಕನ್ನಡ ಅನುಷ್ಠಾನದ ಬಗ್ಗೆ ಹಲವು ಬಾರಿ ತೀರ್ಮಾನ ಮಾಡಿದ್ದೇವೆ. ಲೈಸೆನ್ಸ್ ಕೊಡುವ ಸಮಯದಲ್ಲಿ ಕೂಡ ಕನ್ನಡ ಬೋರ್ಡ್ ಬಗ್ಗೆ ಹೇಳಿದ್ದೇನೆ. ಈಗ ಕರವೇ ಬಲವಂತವಾಗಿ ಬೋರ್ಡ್ ತೆಗೆಯುವ ಒಡೆಯುವ ಕೆಲಸ ಮಾಡಿದ್ದಾರೆ.  ಅವರು ಸಾರ್ವಜನಿಕರಿಗೆ ಧಕ್ಕೆ ತರುವ ಕೆಲಸ ಮಾಡಬಾರದಾಗಿತ್ತು. ಅದಕ್ಕಾಗಿ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಕನ್ನಡ ಕಡ್ಡಾಯ ಮಾಡೋದಕ್ಕೆ ಸೂಚನೆ ಕೊಟ್ಟಿದ್ದೇವೆ. ಬಿಬಿಎಂಪಿಯವರು ಫೆಬ್ರವರಿ 28 ಗಡುವು ನೀಡಿದ್ದಾರೆ. ಕಡ್ಡಾಯ ಮಾಡುತ್ತೇವೆ ಆದರೆ  ಸ್ವಲ್ಪ ಸಮಯ ಕಾಯಬೇಕಲ್ವಾ ಎಂದು ತಿಳಿಸಿದರು.

 ಪೊಲೀಸರು ಸರಿಯಾಗಿ ನಡೆಸಿಕೊಂಡಿಲ್ಲ ಅಂದರೆ ಹೇಗೆ? ಪ್ರತಿಭಟನೆ ಮಾಡಲು ಒಂದಷ್ಟು ಸಮಯ ಕೊಡ್ತಾರೆ. ಕಾನೂನಿನ ಉಲ್ಲಂಘನೆ ಮಾಡಿದ್ರೆ ಸುಮ್ಮನಿರೋಕೆ ಆಗಲ್ಲ. ಮಾಲ್ ​ಗಳಲ್ಲೂ ಕೂಡ ಭದ್ರತೆ ಕೇಳ್ತಾರೆ, ಕೊಡಬೇಕಲ್ವಾ? ನಾವು ಯಾರ ಪರವೂ ಇಲ್ಲ, ವಿರೋಧವೂ ಇಲ್ಲ. ಕಾನೂನನ್ನ ಯಾರೇ ಉಲ್ಲಂಘಿಸಿದ್ದರೂ ಸುಮ್ಮನಿರಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದರು.

Key words: Arrest –kannada organization- activist- Home Minister -Dr. G. Parameshwar.

Tags :

.