ಶಾಸಕ ಮುನಿರತ್ನ ಬಂಧನ : ಡಿಸಿಎಂ ಡಿಕೆಶಿ ವಿರುದ್ದ ರಮೇಶ್ ಜಾರಕಿಹೊಳಿ ತೀವ್ರ ವಾಗ್ದಾಳಿ
ಬೆಳಗಾವಿ,ಸೆಪ್ಟಂಬರ್,16,2024 (www.justkannada.in): ಗುತ್ತಿಗೆದಾರ ಚಲುವರಾಜು ಎಂಬುವವರಿಗೆ ಜಾತಿ ನಿಂದನೆ , ಜೀವ ಬೆದರಿಕೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಮುನಿರತ್ನ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಮೇಶ್ ಜಾರಕಿಹೊಳಿ, ಬಿಜೆಪಿ ಶಾಸಕ ಮುನಿರತ್ನ ಪ್ರಕರಣದಲ್ಲಿ ಡಿಕೆ ಕಂಪನಿ ಇದೆ. ಪ್ರಕರಣವನ್ನ ಸಿಬಿಐಗೆ ಕೊಡಬೇಕು. ಪ್ರಕರಣ ಸಿಬಿಐಗೆ ಕೊಟ್ಟರೇ ಸತ್ಯಾಸತ್ಯತೆ ಹೊರಬರುತ್ತೆ. ಡಿಕೆ ಶಿವಕುಮಾರ್ ಗೆ ಈ ಕೆಲಸ ಬಿಟ್ಟರೆ ಬೇರೆ ಕೆಲಸವಿಲ್ಲ ಡಿಕೆ ಶಿವಕುಮಾರ್ ಯಾವುದೇ ಹೋರಾಟದಿಂದ ಬೆಳೆದಿಲ್ಲ. ಡಿಕೆ ಶಿವಕುಮಾರ್ ಗ್ರಾಮ ಪಂಚಾಯತ್ ಸದಸ್ಯ ನಾಗಲೂ ಲಾಯಕ್ಕಿಲ್ಲ. ಅಡ್ಜೆಸ್ಟ್ ಮೆಂಟ್ ರಾಜಕಾರಣಿ ಆಗಿದ್ದಕ್ಕೆ ಶಾಸಕ ಆಗಿದ್ದಾನೆ. ಅಡ್ಜೆಸ್ಟ್ ಮೆಂಟ್ ಆಗಿದ್ದಕ್ಕೆ ಏಳೆಂಟು ಬಾರಿ ಶಾಸಕ ಆಗಿದ್ದಾನೆ. ಮುಂದಿನ ಬಾರಿ ಸೋಲುತ್ತಾನೆ ಎಂದು ಏಕವಚನದಲ್ಲಿ ಕಿಡಿಕಾರಿದ್ದಾರೆ.
ಮುನಿರತ್ನ ಬೈದಿರುವುದು ಸಾಬೀತಾಗಿಲ್ಲ ಎಫ್ ಎಸ್ಎಲ್ ವರದಿ ಬರುವವರೆಗೆ ನಮ್ಮವರು ಮಾತನಾಡಬಾರದು. ಹಿಂದೆ ಮುಂದೆ ನೋಡದೇ ಈ ರೀತಿ ಮಾತನಾಡುತ್ತಿದ್ದಾರೆ. ಅಶೋಕ್ ಮುನಿರತ್ನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುನಿರತ್ನ ಬೈದಿರುವುದು ಇನ್ನೂ ಸಾಬೀತಾಗಿಲ್ಲ. ಆಡಿಯೋ ಕಟ್ ಆ್ಯಂಡ್ ಪೇಸ್ಟ್ ಇರಬಹುದು. ಮುನಿರತ್ನ ವಿಚಾರದಲ್ಲಿ ದುಡುಕಿನ ನಿರ್ಧಾರ ಮಾಡಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
Key words: Arrest, MLA Muniratha, Ramesh Jarakiholi, DCM DK Shivakumar