HomeBreaking NewsLatest NewsPoliticsSportsCrimeCinema

ಕಾಡು ಪ್ರಾಣಿ ಬೇಟೆಯಾಡುತ್ತಿದ್ದ ಇಬ್ಬರ ಬಂಧನ.

11:31 AM May 14, 2024 IST | prashanth

ಮೈಸೂರು,ಮೇ,14,2024 (www.justkannada.in): ಮೈಸೂರು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕಾಡು ಪ್ರಾಣಿ ಬೇಟೆಯಾಡುತ್ತಿದ್ದ ಇಬ್ಬರನ್ನ ಬಂಧಿಸಿದ್ದಾರೆ.

ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮ ತಟ್ಟಳ್ಳಿ ಹಾಡಿಯ ಜೆ.ಎಂ.ಮಂಜು, ಪಿರಿಯಾಪಟ್ಟಣ ತಾಲೂಕಿನ ಅಬ್ಬಳತಿ ಗ್ರಾಮದ ಮೋಹನ್ ಅಲಿಯಾಸ್ ತಮ್ಮಣ್ಣ ಬಂಧಿತ ಆರೋಪಿಗಳು. ಬಂಧಿತ ಇಬ್ಬರು ಹುಣಸೂರು ತಾಲ್ಲೂಕಿನ  ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ  ಅಪರೂಪದ ಕೂರ (ಮೌಸ್‌ಡೀರ್) ಬೇಟೆಯಾಡಿದ್ದರು.

ಇದೀಗ ಇಬ್ಬರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದು ಚನ್ನಂಗಿ ಗ್ರಾಮದ ದಿಡ್ಡಳ್ಳಿ ಹಾಡಿಯ ಜಯಂತ್ ಅಲಿಯಾಸ್ ಪುಟ್ಟಣ್ಣ ಎಂಬಾತ ಪರಾರಿಯಾಗಿದ್ದಾನೆ. ಕೃತ್ಯಕ್ಕೆ ಬಳಸಿದ್ದ ಬಂದೂಕಿನೊಂದಿಗೆ ಆರೋಪಿ ಪರಾರಿಯಾಗಿದ್ದಾನೆ.

ಬಂಧಿತರಿಂದ ಕೂರದ ಕಳೆಬರ, ಕೃತ್ಯಕ್ಕೆ ಬಳಸಿದ್ದ ಬ್ಯಾಗ್ ಮತ್ತಿತರ ಪರಿಕರಗಳನ್ನ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Key words: Arrest, two, hunting, wild animals

Tags :
Arrest - two - hunting -wild animals-mysore
Next Article