ನಾನು ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದೆ – ಮಾಜಿ ಸಚಿವ ಶ್ರೀರಾಮುಲು
12:53 PM Nov 04, 2023 IST
|
prashanth
ಗದಗ, ನವೆಂಬರ್,4,2023(www.justkannada.in): ವಿಧಾನಸಭೆ ಚುನಾವಣೆ ನಡೆದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳಾದರೂ ಸಹ ಬಿಜೆಪಿ ಹೈಕಮಾಂಡ್ ಇನ್ನೂ ವಿಪಕ್ಷ ನಾಯಕರನ್ನ ಆಯ್ಕೆ ಮಾಡಿಲ್ಲ. ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷರನ್ನೂ ಬದಲಾವಣೆ ಮಾಡಿಲ್ಲ. ಈ ಮಧ್ಯೆ ಮಾಜಿ ಸಚಿವ ಶ್ರೀರಾಮುಲು ನಾನು ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದೆ ಎಂದಿದ್ದಾರೆ.
ಈ ಕುರಿತು ಮಾತನಾಡಿದ ಶ್ರೀರಾಮುಲು, ನಾನು ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದೆ. ಆದರೆ ನನ್ನ ಪ್ರಯತ್ನ ಫಲಿಸಿಲ್ಲ. ನಾನು ಪ್ರಯತ್ನ ಮಾಡಿದ್ದೆ, ಆದ್ರೆ ಆಗಲ್ಲ ಅಂತಾ ಗೊತ್ತಾಯಿತು. ಚುನಾವಣೆಯಲ್ಲಿ ಸೋತಿದ್ದೀನಿ, ಅದಕ್ಕೆ ಪಕ್ಷದ ಕೆಲಸ ಮಾಡುತ್ತೇನೆ. ಖಾಲಿ ಇದ್ದೇನಲ್ಲಾ, ಪಕ್ಷದ ಕಾರ್ಯಕರ್ತನಾಗಿ ದುಡಿಯುತ್ತೇನೆ ಎಂದರು.
Key words: aspirant - post -BJP -state -president – former minister- Sriramulu
Next Article